ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಸುಗಮವಾಗಿ ಪ್ರಾರಂಭ

 ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಸುಗಮವಾಗಿ ಪ್ರಾರಂಭ



ಚಿಕ್ಕೋಡಿ: ಇಂದು ರಾಜ್ಯಾದ್ಯಂತ ಬುಧವಾರ ಎಸ್ ಎಸ್ ಎಲ್ ಸಿ ಪರೀಕ್ಷಾ ಪ್ರಾರಂಭವಾಗಿದೆ.  ಕನ್ನಡ, ಉರ್ದು ,ಹಿಂದಿ, ಇತ್ಯಾದಿ ಭಾಷೆಗಳನ್ನು ಪ್ರಥಮ ಭಾಷೆಯಾಗಿ ತೆಗೆದುಕೊಂಡ ವಿದ್ಯಾರ್ಥಿಗಳು ಇಂದು ಪರೀಕ್ಷೆ ಪ್ರಾರಂಭಿಸಿದ್ದಾರೆ. ಅಂತೆಯೇ ಚಿಕ್ಕೋಡಿ  ಶೈಕ್ಷಣಿಕ ಜಿಲ್ಲೆಯಲ್ಲಿಯೂ ಸಹ ಬುಧವಾರ  ಸರಿಯಾದ ಸಮಯಕ್ಕೆ ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಾರಂಭ ಗೊಂಡಿತು.


ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಅಥಣಿ ತಾಲೂಕಿನಲ್ಲಿ 6828 ವಿದ್ಯಾರ್ಥಿಗಳಲ್ಲಿ 6785 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿದ್ದು 43 ಜನ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿಲ್ಲ. ಅಂತೆಯೇ ನಿಪ್ಪಾಣಿ ತಾಲೂಕಿನಲ್ಲಿ 389 ವಿದ್ಯಾರ್ಥಿಗಳಲ್ಲಿ 3798 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿದ್ದು 21 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿರುವುದಿಲ್ಲ. ಚಿಕ್ಕೋಡಿಯಲ್ಲಿ 5178 ವಿದ್ಯಾರ್ಥಿಗಳಲ್ಲಿ 5132 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿದ್ದು, 46 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿರುವುದಿಲ್ಲ. ಗೋಕಾಕ್ನಲ್ಲಿ 4454 ವಿದ್ಯಾರ್ಥಿಗಳಿಗೆ 4414 ವಿದ್ಯಾರ್ಥಿಗಳು ಪ್ರಥಮ ಕನ್ನಡ ಭಾಷೆಯನ್ನು ಪರೀಕ್ಷೆಗೆ ಹಾಜರಾಗಿದ್ದು ಉಳಿದ 40 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ. ಹುಕ್ಕೇರಿಯ ತಾಲೂಕಿನಲ್ಲಿ 6891 ವಿದ್ಯಾರ್ಥಿಗಳಲ್ಲಿ 6, 820 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 71 ವಿದ್ಯಾರ್ಥಿಗಳು ಆಗಿದ್ದಾರೆ. ಕಾಗವಾಡದಲ್ಲಿ 2306ರ ವಿದ್ಯಾರ್ಥಿಗಳಿಗೆ 2288 ವಿದ್ಯಾರ್ಥಿಗಳ ಹಾಜರಿದ್ದು 18 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಿಯಾಗಿದ್ದಾರೆ, ಮೂಡಲಗಿಯಲ್ಲಿ 7103 ವಿದ್ಯಾರ್ಥಿಗಳಿಗೆ ರೂ.7,064 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿದ್ದು 39 ವಿದ್ಯಾರ್ಥಿಗಳು ಗೈರು ಹಾಜರಿಯಾಗಿದ್ದಾರೆ. ರಾಯಬಾಗ ತಾಲೂಕಿನಲ್ಲಿ 7347 ವಿದ್ಯಾರ್ಥಿಗಳಿಗೆ 7277 ವಿದ್ಯಾರ್ಥಿಗಳು ಹಾಜರಿದ್ದು 70 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. 


ಒಟ್ಟಾರೆಯಾಗಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 43926 ವಿದ್ಯಾರ್ಥಿಗಳಿಗೆ 43578 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 348 ವಿದ್ಯಾರ್ಥಿಗಳು ಪ್ರಥಮ ಪರೀಕ್ಷೆಯಾದ ಕನ್ನಡ, ಉರ್ದು, ಹಿಂದಿ, ಸಂಸ್ಕೃತ, ಪ್ರಥಮ ಭಾಷೆ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. 


ಪರೀಕ್ಷೆಯ ಪ್ರಾರಂಭದಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರಾದ ಆರ್ ಎಸ್ ಸೀತಾರಾಮ ಅವರು ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ನೀಡುವುದರ ಮೂಲಕ ಪರೀಕ್ಷಾ ಕೊಠಡಿಗಳಿಗೆ ಸ್ವಾಗತ ಬಯಸಿದರು. ಜೊತೆಗೆ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಿ ಉತ್ತಮ ಅಂಕ ಪಡೆದುಕೊಳ್ಳುವಂತೆ ಶುಭಾಶಯ ಕೋರಿದರು. ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯ ನೋಡಲ್ ಅಧಿಕಾರಿಯಾದ ಹರಿದಾಸ ಖಾಡೆ ಹಾಗೂ ಶಿಕ್ಷಣ ಇಲಾಖೆಯ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.  ಪರೀಕ್ಷೆಯ ಸಿಬ್ಬಂದಿಗಳು ತಮ್ಮ ಕರ್ತವ್ಯಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿದ್ದಾರೆ.  ಇಡೀ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಎಂಟು ತಾಲೂಕಿನಲ್ಲಿ ಪರೀಕ್ಷಾ ಸಮಯಕ್ಕೆ ಸಂಬಂಧಿಸಿದಂತೆ ಯಾವುದೇ ಅಹಿತಕರ ಘಟನೆಗಳು ಸಂಭವಿಸಿರುವುದಿಲ್ಲ ಎಂದು ಪರೀಕ್ಷಾ ನೋಡಲು ಅಧಿಕಾರಿಯಾದ ಹರಿದಾಸ ಖಾಡೆ ತಿಳಿಸಿದರು.


ವರದಿ :  ಡಾ ವಿಲಾಸ್ ಕಾಂಬಳೆ

Image Description

Post a Comment

0 Comments