*ಬಾಲಿಶ ವರ್ತನೆ ತೋರಿದಾಗ
ಬಲುಬಲಿಷ್ಠನು ನಾನು ಸಮರದೊ-
ಳಿಳಿದು ಗೆಲ್ಲುವೆ ನಾನಿರಾನನು
ಸುಲಭದಲಿ ಜಯಪಡೆವೆನೆನ್ನುತ ಬೊಗಳೆ ಬಿಟ್ಟಾಗ|
ಎಲವೊ ಮೂರ್ಖನೆ ಸುಮ್ಮನೇತಕೆ
ಹುಲಿಯ ಬಾಲವನೆಳೆದು ಕೆಣಕುವೆ
ತಿಳಿವಿರದ ಪರಿ ನುಡಿಯಬಾರದು ಮಾಡದಿರು ಯುದ್ಧ||೧೭೨||
*ಕಿಗ್ಗಾಲು ಎಸ್ ಗಿರೀಶ್*
೧೮-೦೩-೨೦೨೬
0 Comments