ಸಮಾನತೆ ಎಲ್ಲಿದೆ? ಅಸ್ಪೃಶ್ಯತೆ ತಾಂಡವಾಡುತ್ತಿದೆ

 ಸಮಾನತೆ ಎಲ್ಲಿದೆ? ಅಸ್ಪೃಶ್ಯತೆ ತಾಂಡವಾಡುತ್ತಿದೆ 



 ಒಬ್ಬ ವೀರಯೋಧ ದೇಶ ಕಾಯೋ ಸೈನಿಕನು ವೀರ ಮರಣ ಹೊಂದಿದರು ಆ ಊರಿನ ಶ್ರೇಷ್ಠರು ಅಸ್ಪೃಶ್ಯತೆಯನ್ನು ಮೆರೆದರು. ಆತನ ವಿದ್ಯೆ ಬುದ್ಧಿ ತ್ಯಾಗ ಸೇವೆಯ ಲೆಕ್ಕಿಸದೆ ಕೇವಲ ಜಾತಿಯನ್ನೋ ಹೆಸರಿನಲ್ಲಿ ಅಸ್ಪೃಶ್ಯತೆ ಮೆರೆದು ಅಪಮಾನ ಮಾಡಿ ಮತ್ತೊಮ್ಮೆ ಬಲಗೈ ಸಮುದಾಯದವರನ್ನು ಕೆಣಕಿದ್ದಾರೆ.


    ಆ ನಮ್ಮ ತಂದೆ ಬಾಬಾ ಸಾಹೇಬ ಅಂಬೇಡ್ಕರ್ ರವರು  ಸಮಾನತೆ ಕೊಟ್ಟರು. ಆದರೆ ಅದು  ದುಷ್ಟ ಜನರ ಮನದಲಿ ಹುದುಗಿ ಹೋಗಿದೆ. ನಮ್ಮನ್ನು ಮನುಷ್ಯರಂತೆ ಕಾಣದ ಸವರ್ಣಿಯರು ಮನುಷ್ಯರೇ. ಅವನಲ್ಲಿ ಹರಿಯುವನೇತ್ತರು ನಮ್ಮಲ್ಲಿ ಹರಿಯುವ ನೆತ್ತರದ ಬಣ್ಣ ಒಂದೇ ತಾನೇ ತಿನ್ನು ಅನ್ನ, ಸೇವಿಸು ಗಾಳಿ ಕುಡಿಯುವ ಜಲ ಅವರು ಗರ್ಭದಿಂದಲೇ ಹುಟ್ಟಿದ್ದು ನಾವು ಗರ್ಭದಿಂದಲೇ ಹುಟ್ಟಿದ್ದು ಹೀಗಿರುವಾಗ ಪಂಚಭೂತಗಳಿಗಿರದ ಪ್ರಕೃತಿಗಿರದ ಈ ಭೇದ ಭಾವ ಅಸೂಯೆ ಅಸಮಾನತೆ ಶ್ರೇಷ್ಠರಲ್ಲಿ ಯಾಕಿದೆ? ನಾವೇನು ಅವರ ಅಣ್ಣ ಕಸಿದುಕೊಳ್ಳುತ್ತಿದ್ದೀವಾ, ಅವರ ಹಣ ಆಸ್ತಿ ಪಾಸ್ತಿಯಲ್ಲಿ ಪಾಲು ಕೇಳುತ್ತಿದ್ದೀವಾ ಯಾಕೆ ಬಹು ಜನರ ಮೇಲೆ ಹೀಗೆ ಮಾಡುತ್ತಾರೆ ನಮ್ಮನ್ನು ಮಾನವೀಯತೆ ಹೃದಯದಿಂದ ಮನುಷ್ಯರೆಂದು ಯಾಕೆ ನೋಡುತ್ತಿಲ್ಲ? ನಾವೇನು ಈ ಸಮುದಾಯ ಜಾತಿಯಲ್ಲಿ ಹುಟ್ಟಬೇಕೆಂದು ತಪಸ್ಸು ಮಾಡಿ ಹುಟ್ಟಿದ್ದೇವಾ ಅವರೇನು ದೇವಲೋಕದಿಂದ ಇಳಿದು ಬಂದಿದ್ದಾರೆಯೇ ಇಲ್ಲ ತಾನೇ. ಇಷ್ಟೊಂದು ತುಚವಾಗಿ ಕಂಡು ಮಾನಸಿಕವಾಗಿ ನಮ್ಮನ್ನು ಕುಗ್ಗಿಸುತ್ತಿದ್ದರು. ಸಂವಿಧಾನ ಕಾನೂನಿನ ಚೌಕಟ್ಟು ಇದ್ದರೂ ನಮ್ಮ ಮೇಲಿನ ಶೋಷಣೆ ದೌರ್ಜನ್ಯ ಅಸ್ಪೃಶ್ಯತೆ ತಪ್ಪುತಿಲ್ಲ. ಅಂಥವರಿಗೆ ಸರಿಯಾಗಿ ಶಿಕ್ಷೆ ಆಗುತ್ತಿಲ್ಲ ಹೀಗೆ ಆದರೆ ನಮ್ಮ ಮುಂದಿನ ಮಕ್ಕಳ ಮುಂದಿನ ಪೀಳಿಗೆಯ ಭವಿಷ್ಯವನ್ನು ನೆನೆಸಿಕೊಂಡರೆ ಕಲ್ಪಿಸಿಕೊಂಡರೆ ಕರಳು ಕಿತ್ತು ಬಂದಂತೆ ಹೊಟ್ಟೆಯೊಳಗೆ ಕಾರ ಕಲಿಸಿದಂತಾಗುತ್ತದೆ.


  ಮನುವಾದಿಗಳ ಮನ ಜಾತಿಯ ನಶೆಯಿಂದ ತೇಲಾಡಿ ನಮ್ಮಂತವರ ಬಾಳ ನ್ನೇ ನರಕ ಮಾಡುತ್ತಿದ್ದಾರೆ. ಇಂಥವರ ಹೆಡೆಮುರಿ ಕಟ್ಟಬೇಕು. ಪೇಶ್ವೇಗಳ ಕಾಲಕ್ಕೆ ಹೇಗೆ ಇಂತಹ ಅನ್ಯಾಯದ ದೌರ್ಜನ್ಯ  ಸಹಿಸಿಕೊಂಡು ಅವರ ವಿರುದ್ಧ 28,000 ಸೈನಿಕರ ವಿರುದ್ಧ ಕೇವಲ 500 ನಮ್ಮ ಮಹಾರ ಸೈನಿಕರು ಹೇಗೆ ವೀರಾ ವೇಷದಿಂದ ಬುಸುಗುಡುವ  ಸರ್ಪದಂತೆ, ಹಸಿದ ಹೆಬ್ಬುಲಿಯಂತೆ ನೆಗೆದು ಯುದ್ಧ ಮಾಡಿದರೋ ಹಾಗೆಯೇ ಈ 21ನೇ ಶತಮಾನದ ಕಾಲಘಟ್ಟದಲ್ಲಿ ಇಂತಹ ಅನ್ಯಾಯ ಅಸ್ಪೃಶ್ಯತೆ ಶೋಷಣೆಯ ವಿರುದ್ಧ ಮತ್ತೆ ಸಿಡಿದೆದ್ದು ಎರಡನೇ ಭೀಮ ಕೋರೆಗಾವ್ ಯುದ್ಧ ನಡೆಯಬೇಕು. ಸವರ್ಣಿಯರ ನಿರಂತರವಾಗಿ ಈ ರೀತಿ ಘೋರವಾಗಿ ಅಸ್ಪೃಶ್ಯತೆ ಆಚರಿಸಿದರೇ ನಮ್ಮ ಸಮುದಾಯವು ಸ್ವಾಭಿಮಾನದಿಂದ ಕೆಚ್ಚೆದೆಯಿಂದ ಗುಡುಗು ಸಿಡಿಲಿನಂತೆ ಗುಡುಗಿ ಸಿಡಿದೆದ್ದರೆ ಸ್ವಾಭಿಮಾನದ ಯುದ್ಧ ಮತ್ತೊಮ್ಮೆ ಆಗುವುದರಲ್ಲಿ ತಪ್ಪೇ  ಇಲ್ಲ ಬಂಧುಗಳೇ. ಸವರ್ಣಿಯರ ದುಷ್ಟತನಕ್ಕೆ ಕತ್ತರಿ ಹಾಕಬೇಕು ಜಾತಿ ಅನ್ನೋ ಹೆಸರಿನಿಂದ ನಮ್ಮನ್ನು ತುಚ್ಚವಾಗಿ ಕಂಡು ಸದಾ ಮುಳ್ಳಿನಂತೆ ಚುಚ್ಚಿ ನೋಯಿಸುತ್ತಲೇ ಇದ್ದಾರೆ ಅವರ ಅಟ್ಟಹಾಸವನ್ನು ಅವರನ್ನು ಮಟ್ಟ ಹಾಕಬೇಕು.


  ಈ ದರಿದ್ರ ಜಾತಿಯ ವಿನಾಶಕ್ಕೆ ಬಾಬಾ ಸಾಹೇಬರು ಹಗಲಿರಲು ಓದಿದರು ತಮ್ಮ ಮಕ್ಕಳನ್ನೇ ಕಳೆದುಕೊಂಡರು ಸ್ವಂತ ಖುಷಿ ಸುಖವನ್ನೆಲ್ಲ ನಮಗಾಗಿ ತ್ಯಜಿಸಿ ಜೀವ ಜೀವನವನ್ನೇ ಮುಡುಪಾಗಿಟ್ಟು ಹೋರಾಡಿ ಇಂತಹ ಸ್ಥಾನಕ್ಕೆ ನಮ್ಮನ್ನು ತಂದರು ಆದರೂ ಇನ್ನೂ  ಈ ಜಾತಿಯ ಸಂಕೋಲೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲವಲ್ಲ. ಈ ಜಾತಿ ಅಗ್ನಿ ಯಂತೆ ನಮ್ಮನ್ನು ಸುಡುತ್ತಿದೆ.


   ಇನ್ನೂ ನಮ್ಮ ಜನರು ಕಡುಬಡತನದಲ್ಲಿ ಒದ್ದಾಡುತ್ತಿದ್ದಾರೆ.ಅಜ್ಞಾನ ಅಂಧಕಾರದಲ್ಲಿ ಮುಳುಗಿದ್ದಾರೆ.  ತಮ್ಮ ಮಕ್ಕಳನ್ನು ಕೆಲವರು ಜೀವನೋಪಾಯಕ್ಕೆ ಶಾಲೆಗೆ ಕಳುಹಿಸದೆ ಕೆಲಸಕ್ಕೆ ಕಳುಹಿಸಿ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ. ಇಂಥವರನ್ನು ಯಾರು ಮೇಲೆತ್ತುವರು? ನಮ್ಮ ಸಮುದಾಯದ ಜನರ ಕಷ್ಟ ನೋವು ಅಜ್ಞಾನ ಮೌಡ್ಯತೆ ನೋಡಿದರೆ ಮನಕ್ಕೆ ತುಂಬಾ ಬೇಸರವಾಗುತ್ತದೆ . ಮುಂದಿನ ಪೀಳಿಗೆಯ ಭವಿಷ್ಯ ಹೇಗೆ ಏನು ಎನ್ನುವ ಭಯ ಸದಾ ಕಾಡುತ್ತಿರುತ್ತದೆ ಬಂಧುಗಳೇ. ಶಿಕ್ಷಣ ಕಲಿತರೆ ಉದ್ಯೋಗವಿಲ್ಲ ಉದ್ಯೋಗವಿಲ್ಲದೆ ಹಣವಿಲ್ಲ ಹಣವಿಲ್ಲದೆ ಆಸ್ತಿಪಾಸ್ತಿ ಇಲ್ಲ ಹೀಗಾಗಿ ಯುವಕರು ತಪ್ಪು ದಾರಿ ತುಳಿದು ಹಾಳಾಗುತ್ತಿದ್ದಾರೆ. ನಮ್ಮ ಕಣ್ಣ ಮುಂದೇನೆ ಎಷ್ಟೋ ಮಕ್ಕಳು ಹಾಳಾಗಿ ದುಶ್ಚಟಗಳಿಗೆ ಅಂಟಿಕೊಂಡು ಚಿಕ್ಕವಯಸಿಗೆನೇ ಮರಣ ಹೊಂದುತ್ತಿದ್ದಾರೆ. ನಮ್ಮ ಸಮುದಾಯದ  ಜನಗಳು ಮುಗ್ಧರು ಆ ಮುಗ್ಧ ಜನಗಳಿಗೆ ಅನ್ಯಾಯ ಆಗಬಾರದು ಅವರೆಲ್ಲರೂ ಮುಂದೆ ಬರಬೇಕು ಒಳ್ಳೆ ಶಿಕ್ಷಣ ಪಡೆಯಬೇಕು ಶ್ರೀಮಂತರಾಗಬೇಕು ಸುಂದರ ಜೀವನ ನಡೆಸಬೇಕು.


    ನಮ್ಮ ಬಲಗೈ ಸಮುದಾಯದಲ್ಲಿಯೇ ಅನೇಕ ವ್ಯಕ್ತಿಗಳು ಬುದ್ಧಿವಂತರು ಜ್ಞಾನವಂತರು ಓದಿದವರು ಸರ್ಕಾರಿ ನೌಕರರು ಒಳ್ಳೆಯ ಸ್ಥಾನದಲ್ಲಿರುವವರು , ಅಧಿಕಾರದಲ್ಲಿ ಇರುವವರು ಸಮಾಜದ ಕಳಕಳಿ ಹೊಂದಿರುವವರು ಇದ್ದಾರೆ. ಇಂಥವರೆಲ್ಲರೂ ಸ್ವಲ್ಪ ಆಲೋಚಿಸಿ ಏನು ಮಾಡಬೇಕು ಹೇಗೆ ಮಾಡಬೇಕು ಎಂಬುದನ್ನು ತರ್ಕಿಸಿದರೆ ಎಲ್ಲರೂ ಒಗ್ಗಟ್ಟಾಗಿ ದೃಢ ಸಂಕಲ್ಪ ಮಾಡಿದರೆ ಏನಾದರೂ ಒಂದು ನಮ್ಮ ಸಮುದಾಯಕ್ಕಾಗಿ ಮಾಡಬಹುದು. ಅಸ್ಪೃಶ್ಯತೆಯನ್ನು ಹೊಡೆದೋಡಿಸಬಹುದು. ನಮ್ಮ ಜನತೆಗೆ ಶಿಕ್ಷಣದ ಅರಿವು ಅಂಬೇಡ್ಕರ್ ಅವರ ಬುದ್ಧರ ವಿಚಾರಧಾರೆಗಳನ್ನು ಸವಿಧಾನದ ಅರಿವನ್ನು  ಮೂಡಿಸಿ ಮನ ಪರಿವರ್ತನೆ ಮಾಡಬೇಕು. 

       ಓ ನಮ್ಮ ಕುಲಬಾಂಧವರೇ ಇನ್ನಾದರೂ ಏಳಿ ಎದ್ದೇಳಿ ಎಚ್ಚರಗೊಳ್ಳಿ ಮುಂದಿನ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಪಣತೊಟ್ಟು ಹೋರಾಡೋಣ ಶ್ರಮಿಸೋಣ ಪ್ರಬುದ್ಧ ಭಾರತ ಮಾಡಲು ಒಗ್ಗಟ್ಟಾಗೋಣ. ಅಸಮಾನತೆ ತುಳಿದು ಸಮಾನತೆಯ ಪರಿಮಳ ಹರಡಿಸೋಣ ನಾವು ನಿಮ್ಮಂತೆ ಮನುಷ್ಯರು ಎಲ್ಲರೂ ಒಂದೇ ಎಂಬುದನ್ನು ಮನುವಾದಿಗಳಿಗೆ  ಮತ್ತೊಮ್ಮೆ ಮನದಟ್ಟು ಮಾಡೋಣ. 


      ಬಾಬಾ ಸಾಹೇಬರ ಋಣದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ಯೋಚಿಸಿ ಕೈಜೋಡಿಸಿದಾಗ ಬಾಬಾ ಸಾಹೇಬರ ಕನಸು ನನಸಾಗುವುದು. ಕೇವಲ ನಮ್ಮ ಮನೆ ಮಕ್ಕಳು ಮಡದಿ ಕುಟುಂಬ ಅಂತ ಜೀವಿಸದೇ ನಮ್ಮ ಸಮುದಾಯಕ್ಕೆ ನಮ್ಮ ಜನಗಳಿಗಾಗಿಯೂ ಸ್ವಲ್ಪ ಉಸಿರಾಡೋಣ. ಬಾಬಾ ಸಾಹೇಬರು ನಮ್ಮ ಹಾಗೆ ಅವರು ಅವತ್ತು  ತಮ್ಮ ಮನೆ ಕುಟುಂಬ ಅಂತ ಅವತ್ತೇ ವಿಚಾರ ಮಾಡಿದ್ದರೆ ನಾವೆಲ್ಲರೂ ಇಂದು ಇ ಷ್ಟೊಂದು ತಲೆಯೆತ್ತಿ ಓಡಾಡೋಕೆ ಬದುಕೋಕೆ ಉಸಿರಾಡೋಕೆ ಆಗುತ್ತಿರಲಿಲ್ಲ. ಅವರ ತ್ಯಾಗ ಜೀವನವನ್ನು ಒಮ್ಮೆ ನೆನಪಿಸಿಕೊಳ್ಳಿ ನಮಗಾಗಿ ಅವರ ಪಟ್ಟ ಕಷ್ಟ ನೋವು ಅವಮಾನಗಳನ್ನು ಜ್ಞಾಪಿಸಿಕೊಳ್ಳಿ. ಬಾಬಾ ಸಾಹೇಬರ ಆದರ್ಶ ತತ್ವಗಳನ್ನು ಸಾಸಿವೆ ಕಾಳಿನಷ್ಟಾದರೂ ನಮ್ಮಲ್ಲಿ ಇದ್ದರೆ ಬಾಬಾ ಸಾಹೇಬರ ಬುದ್ಧರ ಅನುಯಾಯಿಗಳಾಗಿ ಕೇವಲ ಜೈಕಾರ ಹಾಕದೆ ಬಾಯಲ್ಲಿ ಅಂಬೇಡ್ಕರ್ ವಾದ ಮನೆಯಲ್ಲಿ ಮನುವಾದ ಮಾಡದೆ ಎಲ್ಲರೂ ಒಗ್ಗಟ್ಟಾಗಿ ಒಂದಾಗಿ ನಮ್ಮ ಸಮುದಾಯಕ್ಕಾಗಿ ಮುಂದಿನ ಪೀಳಿಗೆಗಾಗಿ ಕೈಜೋಡಿಸೋಣ ಶ್ರಮಿಸೋಣ ಬಂಧುಗಳೇ.

 ಜೈ ಭೀಮ್ ಜೈ ಸಂವಿಧಾನ 


 ಶ್ರೀಮತಿ ಜ್ಯೋತಿ ಸಂಜು ಮುರಾಳೆ.ಕಬ್ಬೂರ

Image Description

Post a Comment

0 Comments