*ದಿನಪನಿರಿಸಿದ ತಿಲಕ*

 *ದಿನಪನಿರಿಸಿದ ತಿಲಕ*



ತರಣಿ ರಾಮನ ಹಣೆಗೆ ಬೊಟ್ಟ-

ನ್ನಿರಿಸಿ ಗೌರವವನ್ನು ತೋರಲು

ಪುರದ ಜನರಿದರಿಂದ ಪುಳಕಿತರಾಗುವರು ನಲಿದು|

ಎರಡು ಕ್ಷಣಗಳ ದೃಶ್ಯವನು ನಿ

ಬ್ಬೆರಗು ಕಂಗಳಿನಿಂದ ವೀಕ್ಷಿಸಿ

ಸರಿಸರೆಲ್ಲೂ ಕಾಣೆ ರಘುಪತಿಗೆಂದು ಹೊಗಳಿದರು||೧೮೩||


{ ತರಣಿ= ಸೂರ್ಯ; ಸರಿಸ= ಸಮಾನ }


*ಕಿಗ್ಗಾಲು ಎಸ್ ಗಿರೀಶ್*

೨೭-೦೩-೨೦೨೬

Image Description

Post a Comment

0 Comments