ಒಗ್ಗಟ್ಟಿಲ್ಲದೆ ಉಳಿಗಾಲವಿಲ್ಲ
ಶಿಕ್ಷಣದ ಬೆಳಕು ಬಾಳು ಬೆಳಗುವುದು
ಹೋರಾಟ ಹೊಸ ಬದುಕಿಗೆ ನಾಂದಿ ಹಾಡುವುದು
ಸಂಘಟನೆ ಒಗ್ಗಟ್ಟಿನ ಬಲದ ಪಾಠ ತಿಳಿಸುವುದು
ಬಾಬಾ ಸಾಹೇಬರ ತ್ಯಾಗ ಜೀವನ ನಮಗೆ ಮಾದರಿಯಾಗಿರುವುದು.
ಈ ತ್ರಿಶಕ್ತಿಗಳ ಅರಿವು ನಮಗಾದರೆ
ಗೆಲುವಿನ ದಾರಿ ತಾನಾಗೇ ತೋರುವುದು
ಪ್ರಾಮಾಣಿಕತೆಯ ಶ್ರಮವು ಫಲ ನೀಡುವುದು
ವಿಮೋಚನ ಶಕ್ತಿಯು ದಾರಿದೀಪವಾಗುವುದು.
ಒಳಮೀಸಲಾತಿಯ ಹುನ್ನಾರ ಅರಿತುಕೊಂಡರೆ
ಬಲಗೈ ಸಮುದಾಯ ಎಚ್ಚ ರ ಗೊಂಡರೆ
ಮುಂದಿನ ಪೀಳಿಗೆಯ ಭವಿಷ್ಯ ನಿರ್ಮಿಸಲು
ಎಲ್ಲರೂ ಪಣತೊಡುವರು ಹೋರಾಟಕ್ಕೆ ಒಗ್ಗಟ್ಟಾಗಲು.
ದುಶ್ಚಟಗಳಿಗೆ ಬಲಿಯಾಗದೆ ಮೌಡ್ಯತೆಗೆ ಒಳಗಾಗದೆ
ಕ್ಷಣಿಕ ಸುಖಕ್ಕೆ ಹಾತೊರೆಯದೆ ಒಂದಾಗದೆ
ಸ್ವಾರ್ಥಿಗಳಾದರೆ ಮಕ್ಕಳ ಭವಿಷ್ಯ ರೂಪಿಸದೆ
ನಮ್ಮಷ್ಟಕ್ಕೆ ನಾವಿದ್ದರೆ ಒಗ್ಗಟ್ಟಿಲ್ಲದಿದ್ದರೆ ಉಳಿಗಾಲವಿಲ್ಲ ಓ ಕುಲ ಬಾಂಧವರೇ.
ಶ್ರೀಮತಿ ಜ್ಯೋತಿ ಸಂಜು ಮುರಾಳೆ.ಕಬ್ಬೂರ

.gif)

.gif)


0 Comments