*ಅಡುಗೆ ತಯಾರಿಕಾ ಸ್ಪರ್ಧೆ: ಪ್ರತಿಭೆ ಪರಿಶ್ರಮ ಗೌರವಿಸುವ*
*ಅನನ್ಯ ವೇದಿಕೆಯಾಗಿದೆ:* *ಮಹಾಂತೇಶ ಮುಗಳಖೋಡ*
ರಾಯಬಾಗ: ಅಡುಗೆ ತಯಾರಿಕಾ ಸ್ಪರ್ಧೆಯು ಪ್ರತಿಭೆ, ಪರಿಶ್ರಮವನ್ನು ಗೌರವಿಸುವ ಅಪೂರ್ವ ವೇದಿಕೆಯಾಗಿದೆಯೆಂದು ಸಂಪನ್ಮೂಲ ವ್ಯಕ್ತಿ ಮಹಾಂತೇಶ ಮುಗಳಖೊಡ ಹೇಳಿದರು.
ತಾಲೂಕಿನ ಹಾರೂಗೇರಿ ಪಟ್ಟಣದ ಎಚ್ ವಿ ಮಹಾವಿದ್ಯಾಲಯದಲ್ಲಿ ಶನಿವಾರದಿ. 28 ರಂದು ಆಯೋಜಿಸಿದ ತಾಲೂಕು ಮಟ್ಟದ ಅಡುಗೆ ತಯಾರಿಕೆ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಉತ್ತಮ ಆಹಾರ ಒಳ್ಳೆಯ ಆರೋಗ್ಯಕ್ಕೆ ಪೂರಕ ಹಾಗೂ ಪ್ರೇರಕವಾಗಿದೆ ಎಂದರು.
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಯೋಜನೆ ತಾಲೂಕು ಪಂಚಾಯತ,ರಾಯಬಾಗದ ಸಹಾಯಕ ನಿರ್ದೇಶಕರಾದ ಆರ್. ಎಮ್. ಪಾಟೀಲ ಮಾತನಾಡಿ, ಬಿಸಿಯೂಟಕ್ಕೆ ಬಳಸುವ ಆಹಾರ ಧಾನ್ಯಗಳು ಮತ್ತು ಪದಾರ್ಥಗಳನ್ನು ಬಳಕೆ ಮಾಡಿ ಆಹಾರದ ಸೌಂದರ್ಯ, ಹಾಗೂ ಮಾಧುರ್ಯ ಹೆಚ್ಚಿಸುವ ಶುಚಿ ರುಚಿ ಅಡುಗೆ ತಯಾರಿಸುವವರಿಗೆ ಬಹುಮಾನಗಳನ್ನ ನೀಡುವ ಅಪರೂಪದ ಸ್ಪರ್ಧೆಯನ್ನು ಆಯೋಜಿಸಿದ್ದು ಸಾಕ್ಷಾತ್ ಅನ್ನಪೂರ್ಣೇಶ್ವರಿ ಸ್ವರೂಪದಲ್ಲಿರುವ ಅಡುಗೆ ಸಿಬ್ಬಂದಿಯವರಿಗೆ ಸದಾ ಒಳ್ಳೆಯದಾಗಲೆಂದು ನುಡಿದರು.
ಸಿ. ಆರ್. ಪಿ ಟಿ.ಆರ್ ಕೋಳಿ ಪ್ರಾಸ್ತಾವಿಕ ನುಡಿಗಳನ್ನಾಡಿ,ಪ್ರಸ್ತುತ ಜರಗುತ್ತಿರುವ ರಾಯಬಾಗ ತಾಲೂಕು ಮಟ್ಟದ ಅಡುಗೆ ತಯಾರಿಕಾ ಸ್ಪರ್ಧೆಯು ನಳಪಾಕ ಪ್ರವೀಣೆಯರನ್ನು ಹುಟ್ಟು ಹಾಕಲಿದೆಯೆಂದು ಉಸುರಿದರು.
ಶೋಭಾ ಮುತ್ತಪ್ಪಾ ಕಾಂಬಳೆ ಪ್ರಥಮ, ಮಹಾದೇವಿ ಬೆಳಕೂಡ ದ್ವಿತೀಯ,ಸವಿತಾ ಚೌವ್ಹಾನ ತೃತೀಯ ಸ್ಥಾನ ಪಡೆದು ಗಣ್ಯರಿಂದ ಪ್ರಶಸ್ತಿ ಪತ್ರ ಮತ್ತು ನಗದು ಬಹುಮಾನ ಸ್ವೀಕರಿಸಿದರು.
ಅಡುಗೆ ಸಿಬ್ಬಂದಿ ಸಂಘದ ಅದ್ಯಕ್ಷರಾದ ಭಾರತಿ ಜೊಗನ್ನವರ, ಮಾಲಾ ಪತ್ತಾರ,ಮತ್ತು ನಿವೃತ್ತಿ ಹೊಂದಿದ ಇಡಿಗಂಟು ಫಲಾನುಭವಿಗಳನ್ನು ಇದೇ ಸಂದರ್ಭದಲ್ಲಿ ಸತ್ಕರಿಸಿ ಗೌರವಿಸಲಾಯಿತು.
ಆರ್.ಎನ್ ಮುರಾರಿ, ಆರ್.ಬಿ ದರೂರ,ಲಕ್ಷ್ಮಿಕಾಂತ ಬಿಸ್ವಾಗಾರ,ಅನೀಲ ಸರಿಕರ ,ರಾಜು ನಾಯಿಕ, ಸಿದ್ದು ಮಿರ್ಜಿ,ಹಾಗೂ ಎಮ್ ಬಿ ಮದಬಾವಿ ಮೊದಲಾದವರು ಉಪಸ್ಥಿತರಿದ್ದರು.
ಸುಲೇಮಾನ ಶೇಖ ನಿರೂಪಿಸಿದರು. ದಯಾನಂದ ಯರಕದ ಸ್ವಾಗತಿಸಿದರು. ಪ್ರಭು ಕಾಂಬಳೆ ಶರಣು ಸಮರ್ಪಿಸಿದರು.
ವರದಿ:ಡಾ. ಜಯವೀರ ಎ. ಕೆ.
ಖೇಮಲಾಪುರ

.gif)

.gif)


0 Comments