🦜 ಮೌನವಾದ ಹಕ್ಕಿ🦜
ದಿನವು ಮಾತನಾಡುವ ಹಕ್ಕಿ ಮೂರು ದಿನದಿಂದ ಮೌನವಾಗಿದೆ
ಜಾತ್ರೆ ಉತ್ಸವಗಳ ಖುಷಿಯಲ್ಲಿ ಬಂದು ಬಳಗದವರ ಜೊತೆ ಬೆರೆತಿದೆ II
ಆ ಚೆಲುವಿನ ಹಕ್ಕಿ ಶಿಲಬಾಲೆಯಂತೆ
ಕಲ್ಲಿನ ಕೋಟೆಯಿಂದ ಇಳಿದು ಬಂದಂತೆ |
ಕಾವೇರಿ ನದಿಯಲ್ಲಿ ಈಜಾಡಿದಂತೆ
ಎಲ್ಲ ಸೌಂದರ್ಯದ ನಿರೂಪಕಿಯಂತೆ II
ಈ ಚೆಲುವೆ ಹುಟ್ಟಿದಾಗಲೆ ಸೌಂದರ್ಯ ಹೊದ್ದು ಬಂದಿದ್ದಾಳೆ
ದಿನವು ಮೈಸೂರು ಸ್ಯಾಂಡಲ್ ನಲ್ಲಿ ಜಳಕ ಮಾಡುತ್ತಾಳೆ 1
ಪ್ರತಿದಿನ ವಾಸ್ತು ಪ್ರಕಾರ ಸೀರೆ ಉಡುತ್ತಾಳೆ
ನಗುವನ್ನು ಸದಾ ತನ್ನ ಜೊತೆ ತರುತ್ತಾಳೆ II
ಇವಳ ಒಂದೊಂದು ಮಾತು ಸವಿ ಮಾತಂತೆ
ತುಟಿಯಂಚಲ್ಲಿ ಸದಾ ಮಧು ತುಂಬಿದಂತೆ 1
ಇವಳ ನೋಡಿದರೆ ಸಾಕು ಹೃದಯ ಅರಳಿದಂತೆ
ಇವಳ ನೋಟವೊಂದು ಸುಮಬಾಣ ಎಸೆದಂತೆ II
ಪ್ರತಿದಿನ ಮಾತಾಡದಿದ್ದರೆ ಜೀವ ನಿಂತಂತೆ
ಪ್ರತಿಯೊಲೆ ಕಳಿಸದಿದ್ದರೆ ಕತ್ತಲು ಕವಿದಂತೆ I
ಇವಳು ಮೌನವಾದರೆ ಕಬ್ಬಿಣದ ಸಲಾಕೆ ಚುಚ್ಚಿದಂತೆ
ಇವಳೊಡನೆ ಮಾತಾಡಿದರೆ ನಿಂತ ನೆಲ ಚಲಿಸಿದಂತೆ II
✍️ಜೆ ಕೆ ಬಸವರಾಜು ಜಯಪುರ🌱

.gif)

.gif)


0 Comments