🌹*ಗಜ಼ಲ್*🌹
ಹುಡುಕದಿರು ಎನ್ನ ನಿನ್ನೆದೆಗೆ ಅಂಟಿದ ಅಚ್ಚೆಯಲೇ ನಗುತ್ತಿರುವೆನು
ದುಡುಕದಿರು ಚಿನ್ನ ಕೊರಳ ಹಾರದ ಪಚ್ಚೆಯಲೇ ಮಿಂಚುತ್ತಿರುವೆನು
ಕಣ ಕಣದಲಿ ಅಣು ಅಣುವಿನಲಿ ನಿನ ಅಣಿಕಿಸುತ್ತಿರುವೆ ಗಮನಿಸು
ಚಿಂತಿಸದಿರು ಜಾನು ಮಲ್ಲಿಗೆ ಮರುಗದ ಘಮಲಿನಲೇ ಹರಡುತ್ತಿರುವೆನು
ರಾಗಿ ಮೆದೆಯ ಹಾಸಿನಲೇ ಇರುಳ ಕಳೆದೆವು ಹೊಂಬೆಳಕಲಿ
ಅಳುಕದಿರು ಸೋನು ಹಿತ್ತಲು ಗಿಡದ ಹೂವಿನಲೇ ನಲಿಯುತ್ತಿರುವೆನು
ಮೃಗ ಪಕ್ಷಿಗಳ ಕಲರವ ಹಿಮ್ಮೇಳ ಆಗಿದೆ ಎಮ್ಮ ಪರಿಪಾಟಲಿಗೆ
ಪವಡಿಸದಿರು ಧನ್ನು ಜೋಡಿ ಹಕ್ಕಿಗಳ ಒಲವಿನಲೇ ಮಿಡಿಯುತ್ತಿರುವೆನು
ಮುರಳಿ ಗಾನದ ಮೋಡಿಯ ಮಾಡಿದ ಕೃಷ್ಣ ಕುಮಾರ ತನಯ
ಮುಳುಗದಿರು ಭಾನು ಅನುರಾಗ ಮೋದದ ಸೆಳೆತದಲೇ ನಲುಗುತ್ತಿರುವೆನು
🎸ಸುಕುಮಾರ

.gif)

.gif)


0 Comments