ಒಲಿಯದ ಜೀವ

 ಒಲಿಯದ ಜೀವ 



ಒಲಿಯಬೇಕಾದ ಜೀವ ಒಲಿಯಲ್ಲ ಬಾಳೆಲ್ಲಿ ಸುಂದರ 

ಒಲಿಯದ ಚೆಲುವೆ ಎದುರಿದ್ದರೆ ಬದುಕೆಲ್ಲ ರಣಭೀಕರ 1

ಒಲಿದೊಳಿದು ಬಂದಿದ್ದಳು ಒಲವಿನ ಗೆಳತಿ

ನುಲಿನುಲಿಯುತ ಬಂದಿದ್ದಳು ನಾಳೆಯ ಬಾಳಿನ ಒಡತಿ II


ಬೇಸಿಗೆಯ ಹೊಂಗೆ ತಂಪು ನೆರಳಂತಿದ್ದಳು

ಚಳಿಗಾಲದ  ಬೆಚ್ಚನೆಯ ಹೂಡಿಕೆಯಂತಿದ್ದಳು | ಮಳೆಗಾಲದ ಹನಿ ನೆನೆಯದ ಕೊಡೆಯಂತಿದ್ದಳು

ಮೂರೂ ಕಾಲದಿ ಬಿಟ್ಟುಬಿಡದೆ ರಕ್ಷಿಸುವಂತಿದ್ದಳು II


ಮಳೆ ನಿಂತ ಮೇಲೆ ಬರುವ ಕಾಮನಬಿಲ್ಲು

ಮಂಜಿನಂತೆ ಕರಗಿ ಹೃದಯವಾಯಿತೆ ಕಲ್ಲು 1

ಈಗಲೂ ಕಾಡುತ್ತಿವೆ ಅವಳ ಮೀನಂತ ಕಣ್ಣುಗಳು

ಕಣ್ಣೀರು ತರಿಸುತ್ತಿದೆ ಅವಳ ನಗುವ ಕ್ಷಣಗಳು II


ಅವಳು ನನಗೆ ಮೋಸ ಮಾಡಿದಲ

ನನ್ನಿಂದ ಅವಳಿಗೆ ಮೋಸ ವಾಯಿತಾ?

ನನಗೆ ನಾನೇ ಮೋಸ ಮಾಡಿಕೊಂಡೆನಾ?

ಪ್ರೀತಿಯೇ ಹೇಗೆ ಮೋಸ ಮಾಡಿಸಿಬಿಡುತ್ತದೆಯಾ? II


ನಿಂತ ಹೃದಯಕ್ವವಳ ನೋಟ ಜೀವಚೈತನ್ಯ ತಂದಿತ್ತು

ಚಲುವೆಯ ಒಲವೇಕೇ ಅರ್ಧದಾರಿಗೆ ನಿಂತಿತ್ತು 1


ನಿಧಾನಕ್ಕೆ ದ್ವನಿ ಕ್ಷೀಣಿಸುತಿತ್ತು ಅವಳ ಕಾಲಿನ ಗೆಜ್ಜೆ.

ಬಿಟ್ಟು ಹೋರಟಳೆ ನನ್ನ ಎದೆಯಲ್ಲಿ ಅವಳ ಹೆಜ್ಜೆ II



✍️ಜೆ ಕೆ ಬಸವರಾಜು ಜಯಪುರ🌱

Image Description

Post a Comment

0 Comments