ದೇವರ ಗುಡಿಗೇಕೆ ಬಾಗಿಲು?

 ದೇವರ ಗುಡಿಗೇಕೆ ಬಾಗಿಲು?



ಎಲ್ಲವನ್ನು ಕೊಡುವ 

ಏನನ್ನು ಬೇಡದಿರುವ I 

ಯಾರನ್ನು ಕಾಡದಿರುವ

ಎಲ್ಲರನ್ನು ರಕ್ಷಿಸುವ 

ದೇವರ ಗುಡಿಗೇಕೆ ಬಾಗಿಲು.... II


ಎಲ್ಲವನ್ನು ಸಮಚಿತ್ತದಿ ನೋಡುವ 

ಎಲ್ಲರನ್ನೂ ಸಮಾನವಾಗಿ ಕಾಣುವ 1 

ಯಾರನ್ನು ನಿರ್ಲಕ್ಷಿಸಿದ ಯಾರನ್ನು ಪೋಷಿಸದ

ದೇವರ ಗುಡಿಗೇಕೆ ಬಾಗಿಲು.. II


ಒಂದಷ್ಟು ನಾಸ್ತಿಕತೆಯಿರುವ

ಮತ್ತಷ್ಟು ಆಸ್ತಿಕತೆಯಿರುವ I

ಯಾರಿಗು ಕತ್ತಲಾಗದ

ಎಲ್ಲರಿಗು ಬೆಳಕಾಗಿರುವ

ದೇವರ ಗುಡಿಗೇಕೆ ಬಾಗಿಲು. II


ಏನು ಮಾತಾಡದೆ ಎಲ್ಲವನ್ನು ಹೇಳುವ

ಏನು ಕೇಳಿಸಿಕೊಳ್ಳದೆ ಎಲ್ಲವನ್ನು ಅರ್ಥೈಸಿಕೊಳ್ಳುವ1

ಎಂದು ಹಸಿವಾಗದವ 

ಎಂದು ನಿದ್ದೆ ಮಾಡದವ

ದೇವರ ಗುಡಿಗೇಕೆ ಬಾಗಿಲು... II

ಎಲ್ಲಾ ಅಲಂಕಾರವನ್ನು ಬಯಸುವ

ಎಲ್ಲವನ್ನು ತ್ಯಜಿಸಿ ನಿರಾಭರಣ ನಾಗುವ I

ಸದಾ ಅಂತರಂಗದಲ್ಲಿರುವ ಎಂದು ಬಹಿರಂಗವಾಗದವ

ದೇವರಿರುವ ಗುಡಿಗೇಕೆ ಬಾಗಿಲು... ||


✍️ಜೆಕೆ ಬಸವರಾಜು ಜಯಪುರ🌱

Image Description

Post a Comment

0 Comments