*ರಮ್ಜಾನ್ ಹಬ್ಬವು ಎಲ್ಲರಿಗೂ ಶುಭವನ್ನು ತರಲಿ ಎಂಬ ಆಶಯಗಳು*

 *ರಮ್ಜಾನ್ ಹಬ್ಬವು ಎಲ್ಲರಿಗೂ ಶುಭವನ್ನು ತರಲಿ ಎಂಬ ಆಶಯಗಳು*



ಬುವಿಯಲುದ್ಭವಿಸಿರುವ ಯುದ್ಧದ

ತವಕಗಳನೀ ಹಬ್ಬ ರಮ್ಜಾನ್

ತವಿಸಿಹಾಕಲಿಯೆಂದು ಬೇಡುವೆ ನಾನು ದೇವರಲಿ|

ಅವನಿಯಲಿ ನೆಮ್ಮದಿಯನಳಿಸುವ

ಕವಿದ ಸಮರದ ಭೀತಿ ತೊಲಗಲಿ

ಜವನ ಕೇಕೆಯ ರವವು ದುರ್ಬಲಗೊಳಲಿ ಬೇಡುವೆನು||೧೭೭||

[ ಭಾಮಿನೀಷಟ್ಪದಿ ]


{ತವಿಸು= ಕಡಿಮೆಮಾಡು,ಪರಿಹರಿಸು;ಅವನಿ= ಭೂಮಿ; ಜವ= ಯಮ; ರವ= ಧ್ವನಿ}


*ಕಿಗ್ಗಾಲು ಎಸ್ ಗಿರೀಶ್*

೨೦-೦೩-೨೦೨೬

Image Description

Post a Comment

0 Comments