*ವಿಶ್ವ ಗುಬ್ಬಚ್ಚಿ ಸಂರಕ್ಷಣಾ ದಿನ*

 *ವಿಶ್ವ ಗುಬ್ಬಚ್ಚಿ ಸಂರಕ್ಷಣಾ ದಿನ*



ನಾವು ದಡದಿಂದ ಸಾಗರಕ್ಕೆ ಹೋಗುವಾಗ ಎರಡು ಗುಬ್ಬಚ್ಚಿಗಳು ಬೋಟಲ್ಲಿ ಬಂದಿತ್ತು.

ಎರಡು ಆಟ ಆಡುತ್ತ ಕ್ರಿಮಿ, ಕಿಟಗಳನ್ನು ತಿನ್ನುತ್ತಾ ಮೇಲೆ,ಕೆಳೆಗೆ ಹಾರುತ್ತಿತ್ತು.ಈ ಸಾಗರದಲ್ಲಿ ಮರ ಗಿಡಗಳು ಇಲ್ಲಾ ಇದರ ಬದುಕು ಹೇಗೆ..?ನಮಗೂ ಒಂದು ಕುತೂಹಲ ಶುರುವಾಗಿತ್ತು,ನಾವು ಕೆಲವೊಂದು ಸಲ ಅಕ್ಕಿ,ಕಾಳು ಹಾಕ್ತ ಇದ್ದದ್ದು ಉಂಟು.ಗುಬ್ಬಚ್ಚಿ ತಿನ್ನುವುದು ಚಿಂವ್ ಅಂತ ಹಾರುವುದು.ನೋಡಲು ಅಷ್ಟೇ ಸುಂದರವಾಗಿತ್ತು.


ಐದಾರು ದಿನ ಕಳೆದು ಹೋಗಿತ್ತು, ಒಂದಿನ ಬಿರುಗಾಳಿ ಜೋರಾಗಿ ಬೀಸಲು ಶುರು ಮಾಡಿತ್ತು. ನಾವು ದಡ ಕಡೆ ಬೋಟನ್ನು ಓಡಿಸಿಕ್ಕೊಂಡು ಹೋಗುತಿದ್ದೆವು. ರಾತ್ರಿ ಕಳೆದು ಬೆಳಿಗ್ಗೆ ನೋಡಿದಾಗ ಗುಬ್ಬಚ್ಚಿ ನಮಗೆ ಕಾಣೋಕೆ ಸಿಗಲಿಲ್ಲ. ಎಲ್ಲಾ ಕಡೆ ಹುಡುಕಿದೆವು ಎರಡು ಗುಬ್ಬಿಗಳು ಕಾಣಲಿಲ್ಲ.ನಾವು ಅಂದುಕೊಂಡೇವು ಬಿರುಗಾಳಿಗೆ ಸಿಕ್ಕಿ ಹಾರಿ ಹೋಗಿರಬೇಕೆಂದು. ಒಂದು ದಿನ ಕಳೆದು ಎರಡನೇ ದಿನಕ್ಕೆ ಒಂದು ಸಂದಿಯಿಂದ ಒಂದು ಗುಬ್ಬಚ್ಚಿ ಹೊರಗಡೆ ಬಂತು,ಕ್ರಿಮಿ, ಕಿಟಗಳು ಗಾಳಿಗೆ ಹಾರಿ ಹೋದರಿಂದ, ಎಲ್ಲಾ ಕಡೆ ಹಾರುತ್ತ ಕೆಬಿನ್ ಒಳಗಡೆ ಬಂದು ಕುಳಿತಿತ್ತು.


ಹಿಂದೆ ನಮ್ಮ ಹುಲ್ಲಿನ  ಮನೆಯಲ್ಲಿ ಗುಬ್ಬಿಗಳಿಗೆ ಅದೇ ಗೂಡು.ಅಲ್ಲಿ ಸ್ವಚ್ಚಂದವಾಗಿ ಆಟವಾಡುತ್ತ ಜೀವಿಸುತಿದ್ದವು.

ಮರದಲ್ಲಿ ಗೂಡು ಕಟ್ಟುವುದು ಎಷ್ಟೊಂದು ಸುಂದರ ಮತ್ತು ಗುಬ್ಬಿಗಳು ಪ್ರಕೃತಿಯಲ್ಲಿನ ಇಂಜೀನಿಯರ್. 

ಇಂದು ಮನುಷ್ಯನ ಆಧುನಿಕತೆಯಿಂದ, ಗುಬ್ಬಿಗಳು ನಾಡು, ಹಳ್ಳಿಯಿಂದ ಮಾಯವಾಗಿದೆ.ಈ ಪ್ರಕೃತಿಯಲಿ ಬದುಕಲು ಅದಕ್ಕೂ ಹಕ್ಕಿದೆ.

ಓ ಗುಬ್ಬಚ್ಚಿಯೇ ನೀನೆಲ್ಲಿ ಹೋದೆ..


ಕಡಲಕವಿ 

ಶಿವಾನಂದ ಬಿ ಮೊಗೇರ 

ಕರಿಕಲ್, ಭಟ್ಕಳ.

Image Description

Post a Comment

0 Comments