"ಇದು ಕಲ್ಪನೆ ಕಾಮನೆಗಳ ಕವಿತೆಯಲ್ಲ.. ನಮ್ಮೊಳಗೆ ನಾವೇ ನಿತ್ಯ ಹೇಳಿಕೊಳ್ಲಬೇಕಾದ ಬೆಳಕಿನ ಭಾಷ್ಯದ ಭಾವಗೀತೆ. ಅನುದಿನವು ಅನುಕ್ಷಣವು ಅಡಿಗಡಿಗೂ ಬಾಳಿನ ಹಾದಿ ಬೆಳಗುವ ಸತ್ಯ ಅಕ್ಷರಪ್ರಣತೆ. ಇಲ್ಲಿನ ಸಾಲುಗಳು ವಾಚ್ಯವೆನಿಸಬಹುದು. ಸತ್ಯದ ಸಾಲುಗಳು ಸೂಚ್ಯವಾಗದೆ, ವಾಚ್ಯವಾದಷ್ಟು, ಬೆಳಕಿನ ನುಡಿಭಾಷ್ಯ ದೇದೀಪ್ಯವಾದಷ್ಟೂ, ಅನುರಣಿಸುತ ಆಂತರ್ಯ ಬೆಳಗಿದಷ್ಟೂ ಬಾಳಯಾನ ಸುಂದರ. ಭಾವಗಾನ ಮಧುರ. ಏನಂತೀರಾ.?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಜೋಕೆ ಜೀವವೇ...!
ಆತ್ಮಗೌರವವಿರಬೇಕು..
ಅಹಂಕಾರವಿರಬಾರದು.!
ತಗ್ಗುತಬಾಗಬೇಕು..
ತುಳಿಸಿಕೊಳ್ಳಬಾರದು.!
ಉತ್ಸಾಹವಿರಬೇಕು
ಉನ್ಮತ್ತರಾಗಬಾರದು.!
ಪ್ರೀತಿಸಬೇಕು..
ಪರಾಧೀನರಾಗಬಾರದು!
ಕನಸಿರಬೇಕು..
ಕುರುಡರಾಗಬಾರದು!
ಭರವಸೆಯಿರಬೇಕು..
ಭ್ರಮಿಕರಾಗಬಾರದು.!
ಕೋಪವಿರಬೇಕು..
ಕಟುಕರಾಗಬಾರದು.!
ಹಂಬಲವಿರಬೇಕು..
ಹಪಹಪಿಸಬಾರದು.!
ಆರಾಧಿಸಬೇಕು..
ಅಂಧರಾಗಬಾರದು.!
ನೆನಪಾಗಬೇಕು..
ನೋವಾಗಬಾರದು.!
ಅರಸನಾಗಬೇಕು..
ಅಸುರನಾಗಬಾರದು.!
ಬೆಳಕಾಗಬೇಕು..
ಬೆಂಕಿಯಾಗಬಾರದು.!
ಎ.ಎನ್.ರಮೇಶ್. ಗುಬ್ಬಿ.
.gif)

.gif)


0 Comments