*ವಸಂತನ ತೇರು*

 *ವಸಂತನ ತೇರು* 



ಚೈತ್ರ ಮಾಸದ ಚಿಗುರು 

ಹಸಿರ ಸಿರಿಯ ಕೊನರು

ಹೊಸತನಕ್ಕೆ ನಾಂದಿ ಹಾಡಿದೆ 

ವಸಂತ ಋತುವಿನ ತೇರು .


ಬಿಸಿಲ ಬೇಗೆಯ ನರ್ತನ

ಚಿಗುರಿ ನಗುತಿದೆ ಕಾನನ 

ಹೊಂಗೆ , ಮಾವು, ಬೇವು 

ಭುವಿಗೆ ಶೃಂಗರಿಸಿ ತೋರಣ.


ಭೂರಮೆ ಒಡಲ ಒಡನಾಟ 

ಹೂವು ದುಂಬಿಗಳ ಚೆಲ್ಲಾಟ 

ಫಲ ಪುಷ್ಪ ಪರಿಮಳದಿ

ಪ್ರಕೃತಿ ತಳೆದ ಮೈಮಾಟ .


ವರುಷಕ್ಕೊಮ್ಮೆ ಅರಳುವ ಚೇತನ 

ಜೀವ ಸಂಕುಲಕ್ಕಿದು ಸಿರಿತನ

ಸಂತೋಷ , ಸಂಭ್ರಮ , ಸಡಗರವು

ನವ ಯುಗದ ಆಗಮನ.


ಹೊಂಗೆಯ ಒಗರು,  ಬೇವಿನ ಕಹಿ 

ಮಾವಿನ ಹುಳಿಗೆ ಬೆರೆಸಿ ಸಿಹಿ 

ಸಮರಸದಿ ಬಾಳು ದೂಡುವ 

ಯುಗಾದಿಯ ತತ್ವ ಅರುಹಿ.


      ✍️ಡಾ ಮಹೇಂದ್ರ ಕುರ್ಡಿ

Image Description

Post a Comment

0 Comments