20 ಮಾರ್ಚ್ 1927
------------
ಈ ದೇಶದಲ್ಲಿರುವ ಸಾರ್ವಜನಿಕ ಕೆರೆ,ಬಾವಿ,ಹಳ್ಳ,ಕೊಳ್ಳ,ನದಿಗಳಲ್ಲೆಲ್ಲ ಹಂದಿ,ನಾಯಿ,ನರಿ,ದನ,ಪಕ್ಷಿಗಳೆಲ್ಲ ಹೋಗಿ ನೀರು ಕುಡಿದು ಅಲ್ಲೇ ಮಲ -ಮೂತ್ರಗಳನ್ನೆಲ್ಲ ಮಾಡಿದರೂ ಸಹಿಸಿಕೊಳ್ಳುತ್ತಿದ್ದ ಮೇಲ್ವರ್ಗದವರು ಅದೇ ಕೆಳವರ್ಗದವರು ನೀರು ಮುಟ್ಟಿದಾಗ ನೀರಿಗೆ ಮೈಲಿಗೆ ಆಗಿ ಅಪವಿತ್ರವಾಗುತ್ತದೆOದು ಅಮಾನವೀಯವಾದ ಶಿಕ್ಷೆಗೆ ಗುರಿಪಡಿಸುತ್ತಿದ್ದರು !
ಅಪವಿತ್ರವಾಗುತ್ತದೆOದು ಸಾರ್ವಜನಿಕ ಕೆರೆ ಬಾವಿಗಳ ಸಮೀಪಕ್ಕೂ ದಲಿತ,ಕೆಳವರ್ಗದವರನ್ನು ಸುಳಿಯಗೊಡುತ್ತಿರಲಿಲ್ಲ.ಇಂತಹ ಅಮಾನವೀಯ ವ್ಯವಸ್ತೆಯನ್ನು ದಿಕ್ಕರಿಸಿ ಸಮಾನತೆಯ ಅನುಷ್ಟಾನಕ್ಕಾಗಿ ಬಾಬಾಸಾಹೇಬ್ ಡಾ.ಅಂಬೇಡ್ಕರರು ಮಹಾಡ್ ಕೆರೆ ಆಂದೋಲನವನ್ನು ಹಾಕಿಕೊಳ್ಳುತ್ತಾರೆ.ಈ ಆಂದೋಲನದ ಮೂಲಕ ಎಲ್ಲಾ ಜನತೆಗೆ ಮೂಲಭೂತ ಹಕ್ಕನ್ನು ಒದಗಿಸಿ ಕೊಡುವಲ್ಲಿ ಯಶಸ್ವಿಯೂ ಆಗುತ್ತಾರೆ.ಬಾರತದ ಚರಿತ್ರೆಯಲ್ಲಿ ಮಾನವೀಯ ಹಕ್ಕುಗಳಿಗಾಗಿ ನಡೆದ ಮಹಾನ್ ಆಂದೋಲನವೆOದು ಧಾಖಲಾದ ಈ ಆಂದೋಲನದ ನೆನಪು ಮಾನವ ಹಕ್ಕುಗಳಿಗಾಗಿ ಹೋರಾಡುವ ನಿಟ್ಟಿನಲ್ಲಿ ನಮ್ಮೆಲ್ಲರಿಗೆ ಸ್ಪೂರ್ತಿ...
ಡಾ.ಗೌತಮ್ ಬನಸೋಡೆ.

.gif)

.gif)


0 Comments