*ತಿಳಿಲಿಲ್ಲ*

 ತಿಳಿಲಿಲ್ಲ 



 ಭೀಮನ ನಾವು ಅರಿಯಲಿಲ್ಲ 

 ಭೀಮ ಮಾರ್ಗದಿ ನಡೆಯುತ್ತಿಲ್ಲ 

 ಸಂವಿಧಾನ ನಾವು ಓದುತ್ತಿಲ್ಲ 

 ಅದರ ಅರಿವು ನಮಗಾಗುತ್ತಿಲ್ಲ.


 ಶಿಕ್ಷಣದ ಮಹತ್ವ ತಿಳಿಲಿಲ್ಲ 

 ಒಗ್ಗಟ್ಟಿನ ಬಲವ ಇನ್ನೂ ತನಕ ತಿಳಿಯಲೇ ಇಲ್ಲ 

 ಹೋರಾಟದ ದಾರಿ ಹಿಡಿಯುತ್ತಿಲ್ಲ ಜೈ ಭೀಮ್ ಕೂಗು ಮುಗಿಲೆತ್ತರಕ್ಕೆ ತಾಕುತ್ತಿಲ್ಲ.


 ಅಜ್ಞಾನದಲ್ಲಿ ಮುಳುಗಿ ಹೋಗಿರುವೆವೆಲ್ಲ 

 ಜ್ಞಾನದ ಬೆಳಕು ಪ್ರಜ್ವ ಲಿಸುತ್ತಿಲ್ಲ 

 ಸಮುದಾಯದ ಏಳಿಗೆ ನಮಗೆ ಬೇಕಾಗಿಲ್ಲ 

 ನಮ್ಮ ಸ್ವಾರ್ಥಕ್ಕೆ ನಾವು ಬಲಿಯಾಗುತ್ತಿದ್ದೇವಲ್ಲ.


 ಭೀಮನ ಕನಸು ನಾವು ಅರಿಯುತ್ತಿಲ್ಲ 

 ಅವರ ತ್ಯಾಗದ ಬದುಕಿನ್ನು ತಿಳಿಯುತ್ತಿಲ್ಲ 

 ನಮಗಾಗಿ ಅವರು ಮಡಿದರಲ್ಲ

 ನಾವೇನು ಅವರಿಗೆ ನೀಡಬೇಕೆಂಬುದು ತಿಳಿಯುತ್ತಿಲ್ಲ.


 ಗುಲಾಮರಾಗಿಯೇ ಇನ್ನೂ ಉಳಿದೇವಲ್ಲ 

 ಸಂಘಟನೆಯ ಹೆಸರಲ್ಲಿ ಸ್ವಾರ್ಥಿಗಳಾಗುತ್ತಿದ್ದೇವಲ್ಲ

 ತಿಳಿದವರು ತಿಳಿಯಲಾರದವರಿಗೆ ತಿಳಿಸುತ್ತಿಲ್ಲ 

 ಅಂಬೇಡ್ಕರ್ ಅವರ ವಿಚಾರಗಳನ್ನು ಹೆಸರಿಸ ಬೇಕಿದೆಯಲ್ಲ.


 ಶ್ರೀಮತಿ ಜ್ಯೋತಿ ಸಂಜು ಮುರಾಳೆ.ಕಬ್ಬೂರ

Image Description

Post a Comment

0 Comments