*ಗೈರ್ ಮುರದ್ದಫ್ ಗಝಲ್*

 *ಗೈರ್ ಮುರದ್ದಫ್ ಗಝಲ್*



ಗೆಳತಿ ನಿನಗಾಗಿಯೇ ನಾ ಕಂಡೆ ನೂರಾರು ಕನಸು

ಮನದ ಪ್ರೀತಿ ಹಂಬಲವ ಬಳಿ ಬಂದು ನೆರವೇರಿಸು


ನಿನ್ನೆದೆಯ ಹಚ್ಚನೆಯ ಹಸಿರಿನಲ್ಲಿದೆ ನನ್ನುಸಿರು

ಮುಗ್ಧ ಪ್ರೇಮದ ಎದೆಬಡಿತ ಕಿವಿಗೊಟ್ಟು ಆಲಿಸು


 ಒಲವ ಕಥೆಗೆ ಬ್ರಹ್ಮನೇ‌‌ ಮುನ್ನುಡಿ ಬರೆದಿಹನೆನೋ

ಗೀಚುತಲಿ ಹಾಗೆ ಪ್ರಣಯದ ಅಕ್ಷರಗಳನ್ನೆಲ್ಲ ಕೂಡಿಸು


ಚಡಪಟಿಸಿದೆ ಆಸೆಗಳು ಜೊತೆ ಬಾಳಲು ಬರಲಾರೆಯಾ

ಬೀಸುತಿಹ ತಂಗಾಳಿಯೊಡನೆ ಸದಾ ಆಕಾಶದಿ ತೇಲಿಸು


ಅಶೋಕನ ಜೀವ ನಲಿದಿದೆ ಮಧುಚಂದ್ರದ ಗುಂಗಿನಲಿ

ಕೆಂದುಟಿಯ ಅಮೃತದಿ ಚುಂಬನದ ಮತ್ತಿನಲಿ ಸೋಲಿಸು


*ಅಶೋಕ ಬೇಳಂಜೆ*

Image Description

Post a Comment

0 Comments