ಬಡತನದ ಬಿರುಗಾಳಿಗೆ
ಜೇವನದ ಮೆಲ್ಚಾವಣಿಯೇ
ಹಾರಿ ಹೋಗಿದ್ದರೂ,
ಭವಿಷ್ಯದ ಮೇಲ್ಚಾವಣಿಗೆ
ನಾ ಆಧಾರ ಸ್ತಂಭ
ನಾ ನೀನು ಎಂಬ
ಸ್ವಾರ್ಥದ ಲೋಕದಲಿ
ನಿಸ್ವಾರ್ಥ ಮಮತೆಯ
ಸೇರಗಲ್ಲಿ ಹಾಲುಗಂದ
ನಿದ್ರಿಸುತಿವುದು
ಚಿಂತೆಯಿಲ್ಲ ನನಗೆ
ಚಿಂದಿ ಬಟ್ಟೆಯ
ಚಿಂದಿ ಬದುಕಿದೆಂದು
ಕಂದಮ್ಮಗಳ ಆಸರೆಯೇ
ಸಮಾಧಾನ ಸಾಕೆನೆಗೆ
ಭೂತಾಯಿಯ ತಾಳ್ಮೆ
ತುಸು ಅತ್ತು ಉಮ್ಮಳಿಸಿ
ತುಸು ಹುಸಿನಗೆಯ
ಭರವಸೆಯೇ ಸಾಕೆನಗೆ
ಭವಿಷ್ಯದ ಬದುಕಿನಲಿ...
*ಪಾರ್ವತಿತನಯ*
ಬಸವರಾಜ ಕೆ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments