ರಾಷ್ಟ್ರ ಕವಿ ಕುವೆಂಪು ಅವರ 120 ನೇ ಜನ್ಮ ದಿನಾಚರಣೆ

 ರಾಷ್ಟ್ರ ಕವಿ ಕುವೆಂಪು ಅವರ 120 ನೇ ಜನ್ಮ ದಿನಾಚರಣೆಯನ್ನು


ರಾಯಬಾಗ ತಾಲೂಕಿನ ಚುಟಿಕು ಸಾಹಿತ್ಯ ಪರಿಷತ್ ವತಿಯಿಂದ ಅದ್ಯಕ್ಷರಾದ ಶಿರೂರ ಶ್ರೀಶೈಲ ಅವರು ಪುಷ್ಪ ನಮನ ಸಲ್ಲಿಸಿ, ಕವಿಗಳೆನಿಸಿಕೊಳ್ಳಲು ಆ ಸ್ಥಿತಿ ಪ್ರಕೃತಿ ಜೀವನ ಗತಿಗಳಿಗೆ ಒಳಗೊಂಡು ಅನುಭವದ ಖಣಿ ಆಗಿ,ಬೇಕು, ಮತ್ತು ತಮ್ಮ ಸಾಹಿತ್ಯ ಕವಿತೆಗಳ ಮೂಲಕ ಸಮಾಜಕ್ಕೆ ಮಾದರಿ ಆಗಿರಬೇಕು, ನುಡಿದಂತೆ ಬರೆದಂತೆ ಬದುಕಿದರೆ ಸಾಹಿತ್ಯಕ್ಕೆ ಒಂದು ಗಟ್ಟಿತನ ಬರುವುದೆಂದು ತಿಳಿಸಿದರು. ಕಾರ್ಯಕ್ರಮಕ್ಕೆ ಹುಕ್ಕೇರಿ ತಾಲೂಕಿನ ಶಿಕ್ಷಕರಾದ ಶ್ರೀ ಡಾ ಎಂ ಎಸ್ ಕರಾಡೆ, ಶ್ರೀ ಸಂತೋಷ ಪರೀಟ್, ಶ್ರೀ ಮಹಾಂತೇಶ ಪಾಟೀಲ, ಶ್ರೀ ಶಿವಾನಂದ ಗುಂಡಾಳೆ, ಶ್ರೀ ರಾಜು ದೊಡ್ಡಲಿಂಗನ್ನವರ, ಶ್ರೀ ಎಸ್ ಐ ಅಮ್ಮಿನಭಾವಿ, ಹಾಗೂ ನಾಡಿನ ವಿವಿಧ ಜಿಲ್ಲೆಗಳಿಂದ ಅಭಿಮಾನಿಗಳು, ಸಾಹಿತ್ಯಾಸಕ್ತರು ಭಾಗವಹಿಸಿ ಧನ್ಯತಾಭಾವ ಸೂಚಿಸಿದರೆ, ಇನ್ನೂ ಕೆಲವರು ವಿಶ್ವ ಮಾನವ ಕವಿತೆ ಹಾಗೂ ಅನೀಕೇತನ ಗೀತೆ ಹಾಡುವುದರ ಮೂಲಕ ಗುರುನಮನ ಸಲ್ಲಿಸಿ ಧನ್ಯರಾದರು.


 ವರದಿ : ಡಾ. ವಿಲಾಸ್ ಕಾಂಬಳೆ 

ಕನ್ನಡ ಉಪನ್ಯಾಸಕರು 

ಹಾರೂಗೇರಿ

Image Description

Post a Comment

0 Comments