ತ್ರಿವಿಧ ದಾಸೋಹಿ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಜೀ.
💐💐ನುಡಿ ನಮನ 💐💐
ನಡೆದಾಡುವ ದೇವರು
ನುಡಿಯದಾದರು ಲಿಂಗೈಕ್ಯರಾಗಿ
ಅವರ ಅಡಿಗೆ ಶಾಂತಿ ದೊರಕಿ
ನಡೆ ನುಡಿಗಳಿಗೆ ಅಂಮೃತ ಸಿಕ್ಕಿ
ತ್ರಿವಿಧ ದಾಸೋಹ ರತ್ನ
ಶತಮಾನದ ಶಾಂತಿ ಧೂತ
ಶತಾಯುಷಿ ಸಾಕಾರ ಮೂರ್ತಿ
ಅಮರತ್ವ ಪಡೆದ ದಿವ್ಯ ಚೇತನ
ನುಡಿದಂತೆ ತಾ ನಡೆದು
ಜಗ ನಡೆವ ದಾರಿ ತೋರಿ
ನನ್ನ ಹಾದಿಯಲ್ಲಿ ನೀವು ಸಾಗಿ
ಧನ್ಯತೆ ಪಡೆಯಿರೆಂದ ಯೋಗಿ
ನುಡಿಯದಾದರೂ ನಡೆಯಿದೆ
ನಡೆಯದಾದರೂ ನೀತಿಯಿದೆ
ನುಡಿಯೋಳು ನಡೆಯಾಗಿ ನಿಂದರೆ
ನಮಗೂ ಹಸನಾದ ಬಾಳಿದೆ
ಅಗಲಿದ ದಿವ್ಯ ಚೇತನವು
ಚಿರ ನೂತನ ಚೇತನವಾಗಿ
ಭಾರತ ಮಾತೆ ಮಗುವಾಗಿ
ಮತ್ತೆ ಜನ್ಮ ತಾಳಿ ಜಗವ ಉದ್ಧರಿಸಲಿ
ಜಗವ ಉದ್ಧರಿಸಲಿ
✍🏻ಡಾ. ಮಹೇಂದ್ರ ಕುರ್ಡಿ
ಹಟ್ಟಿ ಚಿನ್ನದ ಗಣಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments