ಎಳೆಯ ಮಕ್ಕಳ ಮೆದುಳಿಗೆ ಕನ್ನಡವೆಂಬುದು ಮೇವಾಗಲಿ : ಸುಖದೇವ ಕಾಂಬಳೆ.

 ಎಳೆಯ ಮಕ್ಕಳ ಮೆದುಳಿಗೆ ಕನ್ನಡವೆಂಬುದು ಮೇವಾಗಲಿ.

ಸುಖದೇವ ಕಾಂಬಳೆ.



ಬೆಳೆಯುತ್ತಿರುವ ನಾಡಿನ ಎಳೆಯ ಕುಡಿಗಳ ಹೃದಯದಲ್ಲಿ ಕನ್ನಡಪ್ರೇಮದ ಬೀಜ ಬಿತ್ತಿ ಕನ್ನಡತನದ ಹುಲುಸಾದ ಫಸಲು ತಗೆಯಬೇಕು. ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿನ ಎಲ್ಲ ಅಧಿಕೃತ ಸಂಸ್ಥೆಗಳು ಪ್ರಯತ್ನಿಸಬೇಕು, ಆ ಮೂಲಕ ಕನ್ನಡ ಭಾಷೆಯ ಬೆಳವಣಿಗೆಗೆ  ರಹದಾರಿ ನಿರ್ಮಿಸಬೇಕೆಂದು ಸಾಹಿತಿ, ಚಿಂತಕ ಸರಕಾರಿ ಪ್ರೌಢಶಾಲೆ, ಬಸ್ತವಾಡದ ಮುಖ್ಯೋಪಾಧ್ಯಾಯ ಸುಖದೇವ ಕಾಂಬಳೆ ಹೇಳಿದರು. ಅವರು ರಾಯಬಾಗ ತಾಲುಕಿನ ಹಿಡಕಲ್ ಗ್ರಾಮದ ಮಾಳಸಿದ್ಧೇಶ್ವರ ತೋಟದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಕನ್ನಡ ಸಾಹಿತ್ಯ ಪರಿಷತ್ತು, ರಾಯಬಾಗ ಇವರು ಹಮ್ಮಿಕೊಂಡ ಕನ್ನಡ ಜಾಗೃತಿ  ಕಾರ್ಯಕ್ರಮವನ್ನು ಉದ್ದೇಶಿಸಿ  ಮುಖ್ಯ ಅತಿಥಿಗಳಾಗಿ ಉಪನ್ಯಾಸ ನೀಡಿದರು.


ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ವಿಶ್ರಾಂತ ಪ್ರಾಧ್ಯಾಪಕ ಹಿರಿಯ ಸಾಹಿತಿ ಶಿವಾನಂದ ಬೆಳಕೂಡ ಇವರು ಮಾತನಾಡಿ ಅವ್ವನ ಎದೆಹಾಲಿನೊಂದಿಗೆ ಬಂದ ಸವಿಗನ್ನಡ ಭಾಷೆಯೇ ನಮ್ಮೆಲ್ಲರ ಜೀವದ ಭಾಷೆ, ಪ್ರತಿಯೊಬ್ಬರು ಕನ್ನಡ ಭಾಷೆಯನ್ನು ಪ್ರೀತಿಸಬೇಕು, ಪೂಜಿಸಬೇಕು. ಇಂಗ್ಲೀಷ್ ವ್ಯಾಮೋಹದಿಂದ ಹೊರಬರಬೇಕೆಂದು ಅಭಿಮತ ವ್ಯಕ್ತಪಡಿಸಿದರು.


ಕಸಾಪ ಅಧ್ಯಕ್ಷ ರವೀಂದ್ರ ಪಾಟೀಲರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯ ಮೇಲೆ  ಸಾಹಿತಿ ಡಾ. ರತ್ನಾ ಬಾಳಪ್ಪನವರ,ಕುಡಚಿ  ಹೋಬಳಿ ಘಟಕದ ಅಧ್ಯಕ್ಷ ಸಂತೋಷ‌ ಸನದಿ ಹಾಗೂ ರಾಯಬಾಗ ಹೋಬಳಿ ಘಟಕದ ಅಧ್ಯಕ್ಷೆ ಮಹಾದೇವಿ ಮಾಳಿ, ರಮಜಾನ ಮುಲ್ಲಾ ಸೇರಿದಂತೆ ಶಿಕ್ಷಕ ಹಾಗೂ ವಿದ್ಯಾರ್ಥಿ ವೃಂದದವರು ಹಾಜರಿದ್ದರು. 

ಕಾರ್ಯಕ್ರಮವನ್ನು ಕಸಾಪ ಗೌರವ ಕಾರ್ಯದರ್ಶಿ ಹಾಗೂ ಪ್ರಧಾನ ಗುರುಗಳಾದ ಶಂಕರ ಕ್ಯಾಸ್ತಿ ಸ್ವಾಗತಿಸಿದರು ಎಸ್ ಸಿ ಟಕ್ಕನ್ನವರ ನಿರೂಪಿಸಿದರು ಕಸಾಪ ಗೌರವ ಕಾರ್ಯದರ್ಶಿ  ಸಾಹಿತಿ ಟಿ ಎಸ್ ವಂಟಗೂಡಿ ವಂದಿಸಿದರು.


ವರದಿ : ಡಾ. ವಿಲಾಸ ಕಾಂಬಳೆ 

ಕನ್ನಡ ಉಪನ್ಯಾಸಕರು 

ಹಾರೂಗೇರಿ

Image Description

Post a Comment

0 Comments