🙏🙏 *ಓಂ ಶ್ರೀ ಶಾರದಾ ಗುರುಭ್ಯೋ ನಮಃ* 🙏🙏
ಶೀರ್ಷಿಕೆ: *ಅಪ್ಸರೆ*
ಯಾರೇ ನೀ ಅಪ್ಸರೆಯೇ
ದೇವಲೋಕದಿಂದ ಬಂದಿರುವೆಯೇ
ರವಿವರ್ಮನ ಕುಂಚದಿ ಅರಳಿರುವೆಯೇ
ಕಾಳಿದಾಸನ ಕಾವ್ಯದ ಕನ್ನಿಕೆಯಾಗಿರುವೆಯೇ
ವಿಶ್ವಾಮಿತ್ರನ ತಪೋ ಭಂಗ ಮಾಡಿದ ಮೇನಕೆಯೇ
ಎಲ್ಲರ ಮನವ ಕಾಡಿಸಿದ ರಂಭೆಯೇ
ಇಂದ್ರನ ಅಸ್ತಾನದ ಊರ್ವಶಿ ತಿಲೋತ್ತಮೆಯೇ
ಇವರೆಲ್ಲರೂ ಅಪ್ಸರೆಯ ಸಾಲಿ ಗೆ ಮೇಲು ಪಂಕ್ತಿಯಲ್ಲವೆ
ಸೀತೆಯನ್ನು ಅಪ್ಸರೆಗೆ ಹೋಲಿಸಲಾದಿತೇ
ದ್ರೌಪದಿಯನ್ನು ಪತಿವ್ರತೆ ಸಾಲಿಗೆ ಸೇರಿಸಿದರಲ್ಲವೇ
ಅರುಂದತಿ ನಕ್ಷತ್ರದಂತೆ ಮಿನುಗುತ್ತಿಲ್ಲವೇ
ರಾಕ್ಷಸ ಪತ್ನಿ ಮಂಡೋದರಿಯು ಪತಿವ್ರತೆ ಎನಿಸಿದ್ದಳಲ್ಲವೇ
ಹಾಗೆಯೇ ಪತಿವ್ರತೆಯರ ಅಪ್ಸರೆ ಸಾಲಿಗೆ ಹೋಲಿಸರು
ಅವರ ಧಾರ್ಮಿಕ ಗುಣಗಳ ಕಡೆಗಣಿಸರು
ಸಾದ್ವಿ ಶಿರೋಮಣಿಗಳು ಅಪ್ಸರೆ ಎನಿಸರು
ಸೌಂದರ್ಯವತಿಯರ ಅಪ್ಸರೆಗೆ ಹೋಲಿಸುವರು
✍️ *ಮಳೆಬಿಲ್ಲು ಡಾ. ಲೀಲಾ ಗುರುರಾಜ್* ತುಮಕೂರು.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments