* ಕಣ್ಣಂಚಿನ ಕುಡಿನೋಟ *

 *ಕಣ್ಣಂಚಿನ ಕುಡಿನೋಟ*


ಕಣ್ಣು ಮಿಟುಕಿಸಿದಾಗ ಹೊಡೆಯಿತು ಆ ಮಿಂಚು 

ಕುಡಿ ನೋಟದೊಳಗಿದೆ ಅದೆಂತದೋ ಒಳಸಂಚು 

ಓ ಹೆಣ್ಣೇ ಆ ನಿನ್ನ ಕಣ್ಣೋಳು ಅದ್ಯಾವ ಹೊಂಚು 

ಅರಿಯೆನು ಮಿಂಚೋ ಸಂಚೊ ಹೊಂಚೋ!


ಆ ನಿನ್ನ ನೋಟದೊಳಗೆ ಇಣುಕಿದೆ ನನ್ನ ನಗೆ 

ಚೆಲುವಿನ ಚಿತ್ತಾರದ ಚಿನ್ನಾಟ ಪ್ರೀತಿಪಾಠ ನನಗೆ 

ಮರಳುಜಾಲಕ್ಕೆ ಈ ನನ್ನ ಮನ ಸಿಕ್ಕಿಕೊಂಡಿತು ಹಾಗೆ 

ಅದೆಂಥ ಆಕರ್ಷಣೆಯ ನೋಟದ ಆಟ ನನಗೆ!


ಕಣ್ಣಂಚಿನ ಕುಡಿನೋಟ ನನಗದು ಬಲು ಇಷ್ಟ 

ಮೈ ಮರೆಸಿ ಆಸೆಗಳ ಹುಟ್ಟಿಸುತಿದೆ ಇದು ಸ್ಪಷ್ಟ 

ಹೇಗೆ ಸಹಿಸಿಕೊಳ್ಳಲಿ ತಡೆದು ತಾಳುವುದು ಕಷ್ಟ 

ಪ್ರೀತಿಯ ಉಕ್ಕಿಸಿದೆ ದಕ್ಕಿಸಿಕೊಳ್ಳುವ ಇದು ಪ್ರೇಮದಾಟ! 


ಆ ಕಣ್ಣೊಳಗೆ ಅಡಗಿದೆ ಮಹಾ ಮೋಹಕ ಶಕ್ತಿ

ಭಾವನೆಗಳ ಅರಳಿಸಬಲ್ಲ ಇದೆಂಥ ನಯನಯುಕ್ತಿ

ಪ್ರೀತಿ ಪ್ರೇಮ ಹುಟ್ಟಿಸಿ ಬೆಳೆಸುವದು ಬಲು ಆಸಕ್ತಿ 

ಆದೇಗೋ ಕಣ್ಣ ಚಳಕದೊಳಗೆ ಹುಟ್ಟಿತು ಪ್ರೀತಿ!

🐤 ಮಾರುತೇಶ್ ಮೆದಿಕಿನಾಳ

Image Description

Post a Comment

0 Comments