ಶಾಸನ...

 ಶಾಸನ...



ರಾಜ ಮಹಾರಾಜರು

ತಮ್ಮ ಆಳ್ವಿಕೆಯ ಗಂಧ

ನಾಡಿನಲ್ಲೆಲ್ಲ ಪಸರಿಸಲು

ತಂದರೊಂದು ಕಲ್ಲು


ಅಕ್ಷರ ಕಲಿತ ಜ್ಞಾನ ಪಂಡಿತರಿಂದ

ಕೆತ್ತಿಸಿದರು ತಮ್ಮ ಪೂರ್ವಪರಾವನ್ನು


ಹಿಂದಿನ ವಿಚಾರಧಾರೆಗಳು

ಇಂದು ನಾವೆಲ್ಲ ತಿಳಿಯುತ್ತಿರುವೆವು

ಶಾಸನ ಎಂಬ ಪಾಲಕಗಳ ಮೂಲಕ

ಪೂರ್ವಜರ ತಾಳ್ಮೆ ಎಂಬುದನ್ನು

ಕೈಗನ್ನಡಿ ಹಿಡಿದಂತೆ ಸಾರುತಿದೆ

ಜಗವನ್ನೆಲ್ಲ 


ನಾನಿರುವೆ ಓದು  ಒಮ್ಮೆ ಎಂದು

ಅಂದಿನ ಜಗದ ಆಗುಹೋಗುಗಳೆಲ್ಲಾವು 

ಅಡಕವಾಗಿವೆ ನನ್ನಲ್ಲಿ


ಒಮ್ಮೆ ತಿಳಿದು ಇಡು ಮುಂದೆ ಹೊಸ ಹೆಜ್ಜೆ

ಸಾಧಿಸು ನೀನು ಒಂದು ಹೊಸದೊಂದು

ಶಾಸನವಾಗಿ ಉಳಿಯಲಿ ನಿನ್ನ ಆಲೋಚನೆಯೊಂದು


ಇಡು ಒಂದು ಹೆಜ್ಜೆ ಮೊದಲು ನನ್ನ ಬಳಿ

ನಾ  ಕಾದಿರುವೆ ನೀನು ಬರುವೆ ಎಂದು ನಾನಿಲ್ಲಿ...




       ಸರಿತ.ಹೆಚ್ ಕಾಡುಮಲ್ಲಿಗೆ...✍️...

Image Description

Post a Comment

0 Comments