* ಸಾವಿರ ದೇವರ ಮುಗಿದು *

 *ಸಾವಿರ ದೇವರ ಮುಗಿದು*



ಸ್ವಾಭಿಮಾನದ ಸೌದವು ಪುಟ್ಟ ಗುಡಿಸಿಲಿನಲ್ಲಿದೆ

ಬಿಗುಮಾನದ ರೌದ್ರವ ನಗುನಗುತ್ತ ಅಳಸುತ್ತಿದೆ

ಅವಮಾನದ ರೋಧದಿ ಬೆಳಕೆಂದು ಬರದಾಗಿದೆ

ಅನುಮಾನದ ಕ್ರೋಧವು ಆತಂಕದ ಕಂಗಳಲ್ಲಿದೆ.......


ನಾಳೆಯ ಕನಸಿಗೆ ಹಂಬಲಿಸಿ ಹಸಿವ ಅಡಗಿಸಿತು

ಉರಿಯದ ಒಲೆ ಉರಿವ ರವಿ ಕಂಡು ಮರುಗಿತು

ಅಂಗಳದ ಹಬ್ಬವನು ಮೌನ ಮೂಕದಿ ನೋಡಿತು

ಬರುವುದೋ ತದ್ರೂಪದ ವಸಂತನೆಂದು ಕಾಯಿತು.....


ಮೊಳೆವ ಪೈರು ಕಾಯಬೇಕು ಕರಗುವ ಮೋಡಕೆ

ಹಸಿರುದಿಸಿ ಫಸಲಿನೊಸಲು ಕೈ ಸೇರದಿರದು ಏಕೆ

ಬಡತನಕೆ ದಮಡಿಯ ಗೈರು ಹಾಜರಿಯ ತೊಡಕೆ

ಕಾದ ಕಾವಲಿಗೆ ಸಂತಸದ ನೀರನುಯ್ಯಲಾಗದೇಕೆ......


ದದ್ದರಿಸುತಿದೆ ಪ್ರೇಮದೊಲುಮೆಯು ಕಾಣಸಿಗದೆ

ಗುಡಿಸಿಲ ಕನಸೆಂದು ಸೋರುತ್ತಿದೆ ಸೋರಗುತ್ತಲಿದೆ 

ರಂಗು ರಂಗನೆಂದು ಪರಿಚಯಿಸದೆ ಸ್ತಬ್ದಚಿತ್ರವಾಗಿದೆ

ಸಾವಿರ ದೇವರ ಮುಗಿದು ಬದುಕಿನೊಲುಮೆಗೆ ಕಾದಿದೆ....


*ರೇಖಾ ವಿ ಕಂಪ್ಲಿ* ✍️

Image Description

Post a Comment

0 Comments