🙏🙏 *ಓಂ ಶ್ರೀ ಶಾರದಾ ಗುರುಭ್ಯೋ ನಮಃ* 🙏🙏
ಶೀರ್ಷಿಕೆ: *ಕಣ್ಣು*
ಪಂಚೆದ್ರೀಯಣಾಮ್ ನಯನo ಪ್ರಧಾನಂ ಎಂಬಂತೆ
ಕಮಲೇ ಕಮಲೋತ್ಪತ್ತಿ: ಎಂಬ ವಾಕ್ಯದಂತೆ
ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣದಂತೆ
ಹರೆಯದ ಪ್ರೇಮಿಗಳಿಗೆ ಕಣ್ ಭಾಷೆಯೇ ಪ್ರಿಯವಂತೆ
ಹೀಗೆ ಕಣ್ಣಿನ ಬಗ್ಗೆ ಬರೆಯೋದೆ ಚಂದವು
ಪಾಪ ಕುರುಡರಿಗೆ ಈ ಭಾಗ್ಯ ಕೊಟ್ಟಿಲ್ಲವು
ಆದರೂ ವಿಶೇಷ ಶಕ್ತಿ ಹೊಂದಿ ರುತ್ತಾರಲ್ಲವು
ಸ್ಪರ್ಶ ಜ್ಞಾನದಿಂದಲೇ ಅತೀoದ್ರೀಯ ಶಕ್ತಿ ಲಭ್ಯವು
ಹೆಣ್ಣಿನ ಕಣ್ಣೋಟಕ್ಕೆ ಮಣಿಯ ದವರಿಲ್ಲ
ಆ ಕಣ್ಣ ಸನ್ನೆ ಭಾಷೆಯೇ ನೂರೆಂಟು ಹೇಳುವುದಲ್ಲ
ಕುಡಿ ನೋಟಕ್ಕೆ ಮನ ಸೋಲದ ಗಂಡುಗಳಿಲ್ಲ
ಇದಕ್ಕೆ ದೇವಾನು ದೇವತೆಗಳೇ ಸಾಕ್ಷಿಯಾಗಿರುವರಲ್ಲ
ಗೌತಮನ ಶಾಪಕ್ಕೆ ಇಂದ್ರನು ಸಹಸ್ರಾಕ್ಷನಾದನು
ದೂರ್ವಾಸರು ಇದರಿಂದಲೇ ಅಹಂಕಾರ ಪಡೆದಿದ್ದರು
ಒಕ್ಕಣ್ಣು ಶುಕ್ರಾಚಾರ್ಯ ದಾನವರ ಗುರುವಾಗಿದ್ದರು
ಮಹಾಶಿವನು ತ್ರಿನೇತ್ರನೆಂದೇ ಕರೆಯುವರು
✍️ *ಮಳೆಬಿಲ್ಲು ಡಾ. ಲೀಲಾ ಗುರುರಾಜ್* ತುಮಕೂರು
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments