ಚಿತ್ರಕ್ಕೆ ಹನಿಗವನ
ಅನನ್ಯ ರೂಪ
ವಿಹರಿಸುತಿರುವ ದೇವ ಗಜಾನನ
ಮೋದಕ ಪ್ರಿಯನ ಬಿರುಸಿನ ಸಂಚಲನ
ಡೊಳ್ಳು ಹೊಟ್ಟೆಯ ಸುಂದರ ತನನ
ಮುದ್ದು ಮೊಗದಲಿ ಜಗದ ಪರಿವೀಕ್ಷಣ
ಪಚ್ಚೆ ಪಿತಾಂಬರ ಕಟ್ಟಿ ರುಮಾಲು
ಕಂಠಿ ಹಾರವು ತೋಳ ಬಂದಿಯೊಳು
ಮುದ್ದು ಬಾಲನು ಅನನ್ಯ ರೂಪದೊಳು
ವಿಹರಿಸುತಿಹನು ಮೂಷಿಕನ ಜೊತೆಯೊಳು
ಗೊರೂರು ಜಮುನ
0 Comments