ಶೀರ್ಷಿಕೆ. ಸಂಕ್ರಾಂತಿ

 ಸಂಕ್ರಾಂತಿಯ ಶುಭಾಶಯಗಳು 


ಶೀರ್ಷಿಕೆ. ಸಂಕ್ರಾಂತಿ 



ಬಂತು ಬಂತು ಸಂಕ್ರಾಂತಿ ಬಂತು

ಮನೆಗೆ ಇಂದು ಸಡಗರ ತಂತು

ಇಂದು ತಿನ್ನವರು ಎಳ್ಳು ಬೆಲ್ಲ 

ಮನವಾಗಲಿ ಪ್ರೀತಿಯ ಮೆಲ್ಲ


ಮಕ್ಕಳು ಹಾರಿಸುವರು ಗಾಳಿಪಟ 

ಗೋವುಗಳು ಓಡುತ ಧೂಳಿಪಟ

ತಿನ್ನುವರು ಅವರೇ ಕಾಯಿ ಕಬ್ಬು

ಹೊರಟು ಹೋಗಲಿ ಮನದ ಕೊಬ್ಬು 


ಉತ್ತರಾಯಣದಿಂದ ದಕ್ಷಿಣಾಯಕೆ

ಸೂರ್ಯನು ಬದಲಾಯಿಸುವ ನೌಕೆ

ಎಲ್ಲರೂ ಮಾಡುತ ಎಣ್ಣೆಯ ಮಜ್ಜನ

ಮನೆಯಲಿ ವಿಧ ವಿಧವಾದ ಭೋಜನ


ಎಳ್ಳು ಬೆಲ್ಲಕೆ ಒಳ್ಳೆಯ ಮಾತಾಡಿ 

ಎಲ್ಲರೂ ದೇವರಲ್ಲಿ ವರವ ಬೇಡಿ

ಇಂದು ತೊಡುವರು ಹೊಸ ಬಟ್ಟೆ 

ಸುತ್ತುವುದು ದೇವ ಅರಳಿ ಕಟ್ಟೆ 


ಕೆ.ಎಸ್.ಪ್ರದೀಪ್ ಕುಮಾರ್ ಬೋಗಾದಿ 379.ಗದ್ದಿಗೆ ಮುಖ್ಯ ರಸ್ತೆ.ಮೈಸೂರು.ಫೋ8618391577

Image Description

Post a Comment

0 Comments