ಶೀರ್ಷಿಕೆ : “ ಸಂಕ್ರಾಂತಿ ಮತ್ತು ಅವಳು ”

 ಶೀರ್ಷಿಕೆ :

“ ಸಂಕ್ರಾಂತಿ ಮತ್ತು ಅವಳು ”



ಸಕ್ಕರೆ ಅಚ್ಚು ಮೆಚ್ಚಿನ ಗೊಂಬೆ 

ಪ್ರೀತಿಯಲಿ ಕರಗಿದ್ದು 

ಬೆಲ್ಲದ ಅಚ್ಚು ಅವಳ ಗಲ್ಲದೆ 

ನನ್ನ ಮುದ್ದಿನ ಗುರುತು 


ಹುರಿದ ಶೇಂಗಾಬೀಜ ಘಮಲು

ಮತ್ತೇರಿಸಿ ಅರೆಘಳಿಗೆ 

ಬೆಂದ ಅವರೆಕಾಯಿ ಘಮಲು

ಮೆಲ್ಲ ರುಚಿ ನೋಡೆಂದಿತ್ತು


ಗುರಿಯಿಲ್ಲದೆ ಬಯಲಲ್ಲಿ ಸಾಗಿತ್ತು

ಅರಿಯದೆ ಕಣ್ಮುಚ್ಚಿ ನಿಂತಾಗಿತ್ತು 

ಅವಳು ಕಣ್ಣ ಕಾಂತಿ ಸ್ವಾಗತ ನೀಡಿ

ಪಥ ಬದಲಿಸಿ ನಡೆದಿದ್ದೆ ಅವಳ ಜೋಡಿ


ಸಿಹಿ ಕಬ್ಬಿನಂತೆ ತುಂಬಿದ ಪ್ರಾಯ 

ಹುರಿಗಡಲೆಯಂತೆ ಮಾತು

ಕೇಳುತ್ತಿರುವ ಮತ್ತಲಿ ಮನವರಳಿಸೆ 

ಸಂಕ್ರಮಣ ಒಂದಾದ ಮನಸು 


ಸೂತ್ರವಿಲ್ಲದ ಗಾಳಿಪಟ ಮನವು 

ಸೂತ್ರವಿಡಿದಳವಳು

ಬಾಳ ಬಾನಿನಂಗಳದಿ ಜೊತೆಯಾಗಿ 

ಸ್ವಚ್ಛಂದವಾಗಿ ಹಾರಾಟವು


✍️…ನಿಮ್ಮವನೆ..ರಾಜ್❣️

Image Description

Post a Comment

0 Comments