*ಮಕರ ಸಂಕ್ರಮಣ*

 *ಮಕರ ಸಂಕ್ರಮಣ*


ಮಕರ ಸಂಕ್ರಮಣ ನಾವೆಲ್ಲ ಸಂಭ್ರಮಿಸೋಣ 

ರವಿಯ ಪಥಸಂಚಲನ ಪುಣ್ಯ ಕಾಲ ಉತ್ತರಾಯಣ 

ಎಳ್ಳು ಬೆಲ್ಲ ಸವಿಯೋಣ ಒಳ್ಳೊಳ್ಳೆ ಮಾತಾಡೋಣ 

ಹಸಿರೇ ಉಸಿರು ರೈತರ ಹಬ್ಬವಿದು ಬನ್ನಿ ಆಚರಿಸೋಣ! 


ಮೈ ಮನದ ಕೊಳೆ ತೊಳಿದುಕೊಳ್ಳಲು ಮಾಡು ಗಂಗಾಸ್ನಾನ 

ಆರಾಧಿಸೋಣ ಬದುಕಿಗೆ ಆಧಾರವಾದ ಪ್ರಕೃತಿಯನ್ನ

ಧ್ಯಾನಿಸಿ ಪೂಜಿಸೋಣ ಆಹಾರ ನೀಡಿದ ನಿಸರ್ಗವನ್ನ

ಸುಂದರ ಸುಗ್ಗಿಯ ಕಾಲ ಕಂಡು ಹಿಗ್ಗಿ ಸಂಭ್ರಮಿಸೋಣ! 


ಗಿಡ ಮರ ಹೂ ಕಾಯಿ ಹಣ್ಣು ಕೊಟ್ಟ ಭೂತಾಯಿ 

ಕೆಟ್ಟ ಕೇಡುಗಾಲ ಕಳೆದು ಸುಖ ನೀಡಲಿ ಭೂದೇವಿ 

ಹೋಳಿಗೆ ಹುಗ್ಗಿ ತರಕಾರಿ ಕಾಳು ಪಲ್ಲೆ ಸಜ್ಜೆ ರೊಟ್ಟಿ

ಪ್ರಕೃತಿ ಮಡಿಲಲ್ಲಿ ಒಟ್ಟೊಟ್ಟಿಗೆ ಕುಳಿತುಕೊಂಡರೆ ರುಚಿ ಸವಿ!

🐤 ಮಾರುತೇಶ್ ಮೆದಕಿನಾಳ

Image Description

Post a Comment

0 Comments