🌹*ಗಜ಼ಲ್*🌹
ಗೋಡೆ ಕಟ್ಟಿದೆ ನೀನು ಮಾತು ಮೌನಗಳ ನಡುವೆ
ಜಾಡು ಹಿಡಿದೆ ನಾನು ತೊರೆದ ಮನಗಳ ನಡುವೆ
ಹೊಸ ನೀರು ಬಂತೆಂದು ಹಳತನು ತೊರೆದೆ ಏಕೆ
ಪಾತಿ ಕಂಡೆನು ಇಂದು ಜರೆದ ಮತಿಗಳ ನಡುವೆ
ಅಭಯ ಹಸ್ತ ಹಿಡಿದು ನೇಹದ ಸಾಂದ್ರತೆ ಅರಿತೆ
ಸಿಹಿಯ ಸವಿದು ಕಳೆದು ಹೋದೆ ರಿಪುಗಳ ನಡುವೆ
ಸೂಜಿ ದಾರ ಬೇಕು ವಸ್ತ್ರ ರೂಪ ಪಡೆಯಲು
ಬಾಜಿ ಗೋಜು ಅಂಟದು ಪುಷ್ಪ ದಳಗಳ ನಡುವೆ
ಕುಹಕ ನಗುವ ಕಳೆದು ಮೋಹಕ ಸ್ಮಿತೆಯ ಹರಿಸು
ಸೋತು ಗೆದ್ದು ಬಿಡುವ ಕಣ್ಣ ಸನ್ನೆಗಳ ನಡುವೆ
🎸*ಸುಕುಮಾರ*
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments