87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರೆಸಿಡೆನ್ಸಿ ಕಾಲೇಜಿನ ಉಪನ್ಯಾಸಕ ನಾಗೊಂಡಹಳ್ಳಿ ಸುನಿಲ್ ಆಯ್ಕೆ

 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರೆಸಿಡೆನ್ಸಿ ಕಾಲೇಜಿನ ಉಪನ್ಯಾಸಕ ನಾಗೊಂಡಹಳ್ಳಿ ಸುನಿಲ್ ಆಯ್ಕೆ



ನಾಗೊಂಡಹಳ್ಳಿ ಗ್ರಾಮದ ಉಪನ್ಯಾಸಕ ಯುವ ಕವಿ ಸುನಿಲ್ ಈ ಬಾರಿ ಮಂಡ್ಯದಲ್ಲಿ ಜರುಗಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಆಯ್ಕೆಯಾಗಿದ್ದಾರೆ. ನಾಗೊಂಡಹಳ್ಳಿ ಸುನಿಲ್ ಪ್ರಸ್ತುತ ಶಿರಾ ನಗರದ ಪ್ರತಿಷ್ಠಿತ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಾ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡು ಈಗಾಗಲೇ ಎರಡು ಕೃತಿಗಳನ್ನು ಪ್ರಕಟಗೊಳಿಸಿದ್ದು, ಮೂರನೇ ಕೃತಿ ಕಥಾ ಸಂಕಲನ ಮುದ್ರಣದ ಅಂಚಿನಲ್ಲಿದೆ. ನಾಗೊಂಡಹಳ್ಳಿ ಸುನಿಲ್ ಅವರನ್ನು ಪ್ರೆಸಿಡೆನ್ಸಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಸದಸ್ಯರಾದ ಚಿದಾನಂದ್ ಎಂ ಗೌಡ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಸುಬ್ರಹ್ಮಣ್ಯ ಡಿ.ಕೆ ಅವರು ಅಭಿನಂದಿಸಿದ್ದಾರೆ.

Image Description

Post a Comment

0 Comments