"ನಾಳೆ ಬೀದರಿನಲ್ಲಿ ಅದ್ವಿತೀಯ ಸಮಾರಂಭದಲ್ಲಿ ಅಪ್ರತಿಮ ಯಾತ್ರೆಯ ಸಮಾರೋಪ"
“ಅಕ್ಷರಜ್ಯೋತಿ ಯಾತ್ರೆ”
- ಇದು ಅಕ್ಷರಕ್ರಾಂತಿ ಜಾತ್ರೆ, ಅರಿವಿನ ಜೈತಯಾತ್ರೆ.
ಇಂತಹ ಮಹಾಸೇವೆಯ ಯಶಸ್ಸಿನಲ್ಲಿ ಭಾಗಿಯಾದ ಸಾರ್ಥಕತೆ ನನ್ನದು. ಹೂವಿನೊಡನೆ ನಾರು ದೈವದ ಮುಡಿಯೇರಿದ ಕೃತಾರ್ಥತೆಯಿದು. ನಿಮ್ಮೆದುರು ನನ್ನಯ ಬದುಕಿನ ಅವಿಸ್ಮರಣೀಯ ಅನುಭವದ ಅನಾವರಣವಿದು.. ಒಂದಕ್ಷರ ಬಿಡದೆ ಓದಿಬಿಡಿ..
‘ಅಕ್ಷರ ಜ್ಯೋತಿ ಯಾತ್ರೆ’ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದವರು “ಅರಿವಿನೆಡೆಗೆ ನಮ್ಮ ನಡಿಗೆ” ಎಂಬ ಘೋಷವಾಕ್ಯದೊಂದಿಗೆ ಶ್ರೀ ಬಸವಕುಮಾರ್ ಪಾಟೀಲರ ಸಾರಥ್ಯದಲ್ಲಿ ನಡೆಸುತ್ತಿರುವ ಅನನ್ಯ ಸೇವಾಯಾತ್ರೆ.
63 ವಯಸ್ಸಿನ ಚಿರಯುವಕ, ದಣಿವರಿಯದ ಚೇತನ, ನಿಸ್ಪೃಹತೆ, ಸೇವಾನಿಷ್ಠೆ, ನಿಸ್ವಾರ್ಥತೆ, ಶೈಕ್ಷಣಿಕ ಆಸ್ಥೆಗಳ ಮಹಾನ್ ಸಮಾಜ ಚಿಂತಕ, ವಕೀಲರೂ ಆಗಿರುವ ಶ್ರೀ ಬಸವಕುಮಾರ್ ಪಾಟೀಲರು ಹಾಗೂ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಹೊಸ ಕನಸು, ಹೊಸ ಸಂಕಲ್ಪ, ಹೊಸ ಭರವಸೆಗಳ ಅನನ್ಯ ಯೋಜನೆ ಹಾಗೂ ಅಪೂರ್ವ ಸಾಧನೆಯ ಪರ್ವವೇ ಈ ರಾಜ್ಯಮಟ್ಟದ “ಅಕ್ಷರ ಜ್ಯೋತಿ ಯಾತ್ರೆ”. ಹಲವು ವರ್ಷಗಳ ಹಿಂದೆ ಬೀದರ್ ಜಿಲ್ಲೆಯಾದ್ಯಂತ ಎಳೆದಿದ್ದ ಅಕ್ಷರಜ್ಯೋತಿ ತೇರನ್ನು ರಾಜ್ಯಾದ್ಯಂತ ಎಳೆಯಬೇಕೆಂಬ ದೃಢ ಸಂಕಲ್ಪದೊಂದಿಗೆ ಆರಂಭಿಸಿರುವ ನವ ಸಾಧನೆಯ ಯಾತ್ರೆ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments