ಡಾ. ವಿಲಾಸ ಕಾಂಬಳೆ ಅವರಿಗೆ ರಾಜ್ಯ ಮಟ್ಟದ ಮಹಾತ್ಮ ಜ್ಯೋತಿಭಾ ಫುಲೆ ಪ್ರಶಸ್ತಿ ಪ್ರದಾನ
ಹಾರೂಗೇರಿ : ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಜಿಲ್ಲಾ ಘಟಕದ ವತಿಯಿಂದ ವಿಜಯಪುರದ ಎಕ್ಸ್ಲಂಟ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ರವಿವಾರದಂದು ಹಮ್ಮಿಕೊಂಡಂತಹ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ ಹಾಗೂ ಜಿಲ್ಲಾ ಶೈಕ್ಷಣಿಕ ಸಮ್ಮೇಳನದಲ್ಲಿ ಸಕ್ಕರೆ ನಾಡು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶೇಗುಣಶಿ ಗ್ರಾಮದ ಎಸ್ ಪಿ ಎಮ್ ಪದವಿ ಮಹಾವಿದ್ಯಾಲಯದ ಕನ್ನಡ ಅಧ್ಯಾಪಕ ಡಾ. ವಿಲಾಸ ಕಾಂಬಳೆ ಅವರಿಗೆ ಮಹಾತ್ಮ ಜ್ಯೋತಿಭಾ ಫುಲೆ ಉತ್ತಮ ಅಧ್ಯಾಪಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಜಿ. ಎಸ್. ಕಾಂಬಳೆ, ಗೌರವಾಧ್ಯಕ್ಷ ಪ್ರಭುಗೌಡ ಪಾಟೀಲ್, ಕಾರ್ಯದರ್ಶಿ ರಮೇಶ ನಾಯಿಕ, ಶಿವಾನಂದ ಕಲ್ಯಾಣಿ, ಅನ್ನಪೂರ್ಣ ಬೆಳ್ಳೆನ್ನವರ, ಬಿ. ಎಸ್.ನಡಗೀರ್, ಡಾ. ಸಿದ್ದಣ್ಣ ಬಾಡಗಿ,ಕಲ್ಲಪ್ಪ ತೋರವಿ, ಬಸವರಾಜ್ ಪೂಜಾರ, ಸಂಜಯ ನಡುವಿನಮನಿ, ಡಾ. ನಂದಾ ತಿಕೋಟಿ ಸೇರಿದಂತೆ ಅನೇಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇವರ ಸಾಧನೆಯನ್ನು ಗುರಿತಿಸಿ ಮಹಾವಿದ್ಯಾಲಯದ ಪ್ರಾಚಾರ್ಯರು, ಕಾರ್ಯದರ್ಶಿಗಳು, ಎಲ್ಲ ಸಿಬ್ಬಂದಿ ವರ್ಗುದವರು, ಮತ್ತು ಶೇಗುಣಶಿ ಗ್ರಾಮದ ಪರಮ ಪೂಜ್ಯ ಶ್ರೀ ಡಾ. ಮಹಾಂತ ದೇವರು, ಹಿರಿಯ ಸಾಹಿತಿ ಡಾ. ಸರಾಜೂ ಕಾಟ್ಕರ್, ಡಾ. ಗುಂಡಣ್ಣ ಕಲಬುರ್ಗಿ, ಡಾ. ಹೊಂಬಾಯ್ಯ, ಕ ಸಾ ಪ ಅಧ್ಯಕ್ಷ ರವೀಂದ್ರ ಪಾಟೀಲ್, ಟಿ. ಎಸ್ ವಂಟಗುಡಿ ಅಭಿನಂದಿಸಿದ್ದಾರೆ.
ವರದಿ : ಬಸವೇಶ್ವರಿ ಕಾಂಬಳೆ
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments