ಶೈಕ್ಷಣಿಕ ಸಮ್ಮೇಳನ ಹಾಗೂ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ ಸಮಾರಂಭ
.
ವಿಜಯಪುರ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕದ ವತಿಯಿಂದ ಜ. 19ರಂದು ಬೆ.10 ಗಂಟೆಗೆ ನಗರದ ಎಕ್ಸಲಂಟ್ ಪಿಯು ಸೈನ್ಸ್ ಕಾಲೇಜ್ ದಲ್ಲಿ ಶೈಕ್ಷಣಿಕ ಸಮ್ಮೇಳನ ಹಾಗೂ ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕದ ಕಾರ್ಯದರ್ಶಿಗಳಾದ ರಮೇಶ ನಾಯಕ ತಿಳಿಸಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಟಿ ಎಸ್ ಕೋಲ್ಹಾರ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಎಕ್ಸ್ ಲೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ಕವಲಗಿ ವಹಿಸಲಿದ್ದಾರೆ. ಕೆಜೆವಿಎಸ್ ರಾಜ್ಯ ಕಾರ್ಯದರ್ಶಿಗಳಾದ ಈ ಬಸವರಾಜು ಪ್ರಾಸ್ತಾವಿಕ ನುಡಿ ನುಡಿಯಲ್ಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೆಜೆವಿಎಸ್ ಉಪಾಧ್ಯಕ್ಷರಾದ ಡಾ. ಆರ್ ಎನ್ ರಾಜಾ ನಾಯಕ, ಅನುಗ್ರಹ ಕಣ್ಣಿನ ಆಸ್ಪತ್ರೆಯ ಡಾ. ಪ್ರಭುಗೌಡ ಪಾಟೀಲ, ಪ್ರಜಾವಾಣಿ ದಿನಪತ್ರಿಕೆಯ ಹಿರಿಯ ಪತ್ರಕರ್ತರಾದ ಬಸವರಾಜ ಸಂಪಳ್ಳಿ, ಡಯಟ್ ಉಪನಿರ್ದೇಶಕರು (ಅಭಿವೃದ್ಧಿ) ಹಾಗೂ ಪ್ರಾಚಾರ್ಯರಾದ ಉಮಾದೇವಿ ಸೊನ್ನದ, ಜಿಲ್ಲಾ ಉಪಯೋಜನಾಧಿಕಾರಿ ಮಂಜುನಾಥ ಗುಳೇದಗುಡ್ಡ ,ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಸ್ ಜೆ ನಾಯಕ, ನಗರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ, ಚಡಚಣ ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತಾ ಹುನ್ನೂರ, ವಿಜ್ಞಾನ ವಿಷಯ ಪರಿವೀಕ್ಷಕ ಶಂಕರ ತಳ್ಳೊಳ್ಳಿ,ಗಣಿತ ಪರಿವೀಕ್ಷಕ ಸಿ ಎಚ್ ಬಿರಾದಾರ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಅಧಿಕಾರಿ ಎ ಕೆ ಹಳ್ಳಿ, ಕೆ.ಜಿ ವಿ ಎಸ್ ಗೌರವಾಧ್ಯಕ್ಷ ಪ್ರಭುಗೌಡ ಪಾಟೀಲ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಶಿವರಾಜ ಬಿರಾದಾರ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ್ ಶೇಡಶ್ಯಾಳ,ಜಿ ಓ ಸಿ ಸಿ ಬ್ಯಾಂಕ್ ನಿರ್ದೇಶಕರಾದ ಹಣಮಂತ ಕೊಣದಿ, ಅರ್ಜುನ್ ಲಮಾಣಿ ಪಾಲ್ಗೊಳ್ಳಲಿದ್ದಾರೆ.
ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಿವಿಧ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 50 ಸಾಧಕರಿಗೆ ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.
ಮಧ್ಯಾಹ್ನ 1:00ಗೆ ಗೋಷ್ಠಿಗಳು ನಡೆಯಲಿವೆ ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ವಹಿಸಲಿದ್ದಾರೆ. ಉಪಸ್ಥಿತಿ ಹಿರಿಯ ಪತ್ರಕರ್ತರಾದ ಅನಿಲ ಹೊಸಮನಿ. ಬಸವರಾಜ ಹಂಚಲಿ, ಅನ್ನಪೂರ್ಣ ಬೆಳ್ಳೆನವರ ಹಾಗೂ ಆರೋಗ್ಯಧಾಮ ಆಸ್ಪತ್ರೆಯ ನ್ಯೂರಾಲಾಜಿಸ್ಟ್ ಡಾ.ಅಶ್ವಿನಿ ಹಿರೇಮಠ ಗೋಷ್ಠಿ ಮಂಡಿಸಲಿದ್ದಾರೆ.
ಮಧ್ಯಾಹ್ನ 3:30 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಅಧ್ಯಕ್ಷತೆಯನ್ನು ಕೆಜೆವಿಎಸ್ ಗೌರವಾಧ್ಯಕ್ಷರಾದ ಪ್ರಭುಗೌಡ ಪಾಟೀಲ, ಉಪಸ್ಥಿತಿಯನ್ನು ಸರ್ಕಾರಿ ಎಸ್ಸಿ ಎಸ್ಟಿ ನೌಕರರ ಸಮನ್ವಯ ಸಮಿತಿಯ ಅಧ್ಯಕ್ಷ ಬಿ ಎಚ್ ನಾಡಗೀರ, ಸಿದ್ದಣ್ಣ ಬಾಡಗಿ, ಬಿ ಕೆ ಪೂಜಾರ, ಸಂಜಯ ನಡುವಿನಮನಿ ವಹಿಸಲಿದ್ದಾರೆ.
ಸಮಿತಿಯ ಅಧ್ಯಕ್ಷ ಜಿ ಎಸ್ ಕಾಂಬಳೆ, ಉಪಾಧ್ಯಕ್ಷ ಬಾಬಾಸಾಹೇಬ ವಿಜಯದಾರ, ಶಶಿಧರ ಕುಂಬಾರ, ಸಹಕಾರ್ಯದರ್ಶಿ ಕಾಶಿಮಾಬಿ ನದಾಫ, ಖಜಾಂಚಿ ಎಸ್ ಬಿ ಗಜಾಕೋಶ, ಸಂಚಾಲಕಿ ನಂದಾ ತಿಕೋಟಿ, ಜಯಮಾಲಾ ಪಾಟೀಲ ಇರಲಿದ್ದಾರೆ.
ವರದಿ : ಡಾ. ವಿಲಾಸ ಕಾಂಬಳೆ
ಕನ್ನಡ ಉಪನ್ಯಾಸಕರು
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments