ಶಿಕ್ಷಣ ಪ್ರಸಾರಕ ಮಂಡಳ ರಾಯಭಾಗ ಶಿಕ್ಷಣ ಮಹಾವಿದ್ಯಾಲಯ ಹಾಗೂ ಎಸ್ ಬಿ ಡಿ ಬಾಲಕಿಯರ ಪ್ರೌಢಶಾಲೆ ಹಾರೂಗೇರಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಸನ್ 2024 25 ನೇ ಸಾಲಿನ ಮೂರನೇ ಸೆಮಿಸ್ಟರನ ಬಿ .ಇಡಿ ವಿದ್ಯಾರ್ಥಿಗಳ ಸಮೂಹ ಬೋಧನಾ ಶಿಬಿರದ ಸಮಾರೋಪ ಸಮಾರಂಭ ಜರುಗಿತು. ಸಮಾರಂಭದ ಮುಖ್ಯ ಅತಿಥಿಗಳಾಗಿ ಹಿಡಕಲ್ ವಸಂತರಾವ ಪಾಟೀಲ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ಸಾಹಿತಿ ಟಿ ಎಸ್ ಒಂಟಗೂಡಿ ಮಾತನಾಡಿ ಶಿಕ್ಷಕರು ಜ್ಞಾನಗಳಗುವ ದಿವ್ಯ ಜ್ಯೋತಿಗಳು ಎಲ್ಲ ಸಂಪತ್ತುಗಳಿಗಿಂತ
ಜ್ಞಾನ ಸಂಪತ್ತು ಶ್ರೀಮಂತವಾದುದು ವಿದ್ಯಾರ್ಥಿಗಳು ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಉಕ್ತಿಯಂತೆ ವಿದ್ಯಾರ್ಥಿಗಳಿಗೆ ಮುಂದೆ ಗುರಿ ಹಿಂದೆ ಗುರು ಇರಬೇಕು ಅಂದಾಗ ಮಾತ್ರ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯ ಜ್ಞಾನಕ್ಕೆ ಜಗತ್ತು ಬೆಳಗುವ ಶಕ್ತಿ ಇದೆ ಯಾರು ಕದಿಯಲಾರದ ಜ್ಞಾನ ಸಂಪತ್ತನ್ನು ಪಡೆದುಕೊಂಡು ಪ್ರತಿಯೊಬ್ಬ ವಿದ್ಯಾರ್ಥಿಯು ಜ್ಞಾನ ಬೆಳಗುವ ಜ್ಯೋತಿಗಳಾಗಬೇಕು ಪ್ರತಿಯೊಬ್ಬ ವಿದ್ಯಾರ್ಥಿಯು ಜೀವನದಲ್ಲಿ ಶಿಸ್ತು ಮೂಡಿಸಿಕೊಂಡು ಜೀವನವನ್ನು ಪಾವನ ಮಾಡಿಕೊಳ್ಳಬೇಕೆಂದು ಪ್ರಾಚಾರ್ಯ ಸಾಹಿತಿ ಟಿ ಎಸ್ ವಂಟಗೂಡಿ ಅಭಿಮತ ವ್ಯಕ್ತಪಡಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಎಸ್ ಬಿ ಡಿ ಬಾಲಕಿಯರ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯನಿಯರಾದ ಶ್ರೀಮತಿ ಎಸ್ ಎಂ ಎಲಿಗಾರ ವಹಿಸಿಕೊಂಡಿದ್ದರು. ವೇದಿಕೆಯ ಮೇಲೆ ಬಿ ಇಡಿ ಮಹಾ ವಿದ್ಯಾಲಯದ ಪ್ರಾಚಾರ್ಯ ಡಾ.ಎಲ್ ಎಸ್ ಧರ್ಮಟ್ಟಿ, ಡಿ ಇ ಡಿ ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಬಿ ಪಡೆದಾರ,ಎಸ್ ಆರ್ ಗುರವ ಮಾರ್ಗದರ್ಶಕೀಯರಾದ ಜಿ.ಎಸ್ ಭಂಗಿ ,ಶಿಬಿರದ ಮುಖ್ಯೋಪಾಧ್ಯಾಯನಿ ಪದ್ಮಶ್ರೀ ಬನಶಂಕರಿ,ಸುರೇಖಾ ಒಡೆಯರ ಹಾಗೂ ಎಲ್ಲ ಪ್ರಾಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳ ವೃಂದ ಹಾಜರಿದ್ದರು. ಕುಮಾರಿ ಪಲ್ಲವಿ ಒಡಗಾವಿ ಸ್ವಾಗತಿಸಿದರು. ಕುಮಾರಿ ರೇಷ್ಮಾ ಕಾಂಬಳೆ ನಿರೂಪಿಸಿದರು. ವಿದ್ಯಾಶ್ರೀ ಕಿದ್ರಾಪುರ ವಂದಿಸಿದರು.
ವರದಿ : ಡಾ. ವಿಲಾಸ್ ಕಾಂಬಳೆ
ಕನ್ನಡ ಉಪನ್ಯಾಸಕರು
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments