ಕವಿವಾಣಿ ಸಾಹಿತ್ಯ ಪರಿಷತ್ತು, ಕರ್ನಾಟಕ ವತಿಯಿಂದ, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್, ಅವರ ಮಹಾಪರಿನಿರ್ವಾಣ ದಿನದ ಪ್ರಯುಕ್ತ, ಹಮ್ಮಿಕೊಂಡಿರುವ ಕಾವ್ಯನಮನ ಕಾರ್ಯಕ್ರಮ.
*****************************
ವಿಷಯ : ಡಾ. ಬಿ. ಆರ್.
ಅಂಬೇಡ್ಕರ್ ಅವರ ಕುರಿತು.
ಪ್ರಕಾರ : ಸ್ವರಚಿತ ಕವನ ರಚನೆ
ದಿನಾಂಕ : ೦೬.೧೨.೨೦೨೪
ಶೀರ್ಷಿಕೆ : ಮಹಾನಾಯಕ
*****************************
ಸಂವಿಧಾನವೆಂಬ ಗ್ರಂಥ ಬರೆದ !
ಸರ್ವರಿಗೂ ಸಕಲವೂ ನೀಡಿದ !
ನಮ್ಮ ಅಂಬೇಡ್ಕರ ಮಹಾನಯಕ !!
ನ್ಯಾಯವೊಂದೇ ದೇವರೆಂದ !
ಅನ್ಯಾಯವನ್ನ ತಡೆಯಿರೆಂದ !
ನಮ್ಮ ಅಂಬೇಡ್ಕರ ಮಹಾನಾಯಕ !!
ಮೇಲು ಕೀಳು ಮೆಟ್ಟಿ ನಿಂತ !
ಸರಿಸಮಾನತೆ ಕಾಣಿರೆಂದ !
ನಮ್ಮ ಅಂಬೇಡ್ಕರ ಮಹಾನಾಯಕ !!
ಮೂಢನಂಬಿಕೆ ಅಳಿಸಿ ಹಾಕಿದ !
ಜ್ಞಾನ ಬೀಜವ ಬಿತ್ತಿ ಬೆಳೆದ !
ನಮ್ಮ ಅಂಬೇಡ್ಕರ ಮಹಾನಾಯಕ !!
ಇವರೇ ನೋಡು ನಮ್ಮ ಭೀಮ !
ಇರುವವರಲ್ಲೇ ಮಹಾಮಹೀಮ !
ಅಂಬೇಡ್ಕರರಿಗೆ ಕೋಟಿ ನಮನ !!
~ಡಾ. ಶಿವಕುಮಾರ. ಲಾ. ಸೂರ್ಯವಂಶ, ಕಲಬುರಗಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments