* ಜಾತ್ಯತೀತ ಸಮಾಜ ನಿರ್ಮಾಣ ಮಾಡುವುದರಲ್ಲಿ ಭೀಮರಾವ್ ಅಂಬೇಡ್ಕರ್ ಅವರ ಪಾತ್ರ ಶ್ಲಾಘನೀಯವಾದದು : ಸಾಹಿತಿ ಟಿ ಎಸ್ ಒಂಟಗೂಡಿ *

 ಹಿಡಕಲ್ :  ಹಿಡಕಲ್ ಗ್ರಾಮದ ಶ್ರೀಜಡಿ ಸಿದ್ದೇಶ್ವರ ನಿಲಯದ ಆವರಣದಲ್ಲಿ ಹಾಗೂ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತು, ತಾಲೂಕು ಘಟಕ ರಾಯಬಾಗ್ ವತಿಯಿಂದ ಡಾ :ಬಿ ಆರ್ ಅಂಬೇಡ್ಕರ್ ಅವರ ಪರಿನಿರ್ವಾಣ ಕಾರ್ಯಕ್ರಮ ನೆರವೇರಿತು.ಸಮಾರಂಭದ ಮುಖ್ಯ ಅತಿಥಿಗಳಾಗಿ ಹಿಡಕಲ್ಲದ ವಸಂತ ರಾವ ಪಾಟೀಲ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಸಾಹಿತಿ ಟಿ ಎಸ್ ಒಂಟಗೂಡಿ ಮಾತನಾಡಿ : ಸಾಮಾನ್ಯರಲ್ಲಿ ಅಸಮಾನ್ಯರಾಗಿ ಬೆಳೆದು, ಹಲವಾರು ಪದವಿ ಪುರಸ್ಕಾರಗಳನ್ನು ಪಡೆದುಕೊಳ್ಳುವುದರ ಮೂಲಕ, ಸಂವಿಧಾನವನ್ನು ರಚಿಸಿ ಸಂವಿಧಾನದ ಮೂಲಕ ಪ್ರತಿಯೊಬ್ಬರಿಗೂ ಮತದಾನದ ಹಕ್ಕನ್ನು ಕೊಡುವುದರ ಮೂಲಕ, ಜಾತ್ಯತೀತ ಸಮಾಜ ನಿರ್ಮಾಣ ಮಾಡುವುದರಲ್ಲಿ ಭೀಮರಾವ್ ಅಂಬೇಡ್ಕರ್ ಅವರ ಸೇವೆ ಶ್ಲಾಘನೀಯವಾದದು ಎಂದು ದೇಶ ಟು ಜಿ 3ಜಿ,4ಜಿ, 5ಜಿ 


ಮೇಲೆ ನಿಲ್ಲದೆ ಅಂಬೇಡ್ಕರ್ ಅವರು ಬರೆದ ಸಂವಿಧಾನದ ನೆಟ್ವರ್ಕ್ ದ ಮೇಲೆ ನಮ್ಮ ದೇಶ ನಿಂತಿದೆ.
ಅಂಬೇಡ್ಕರ್ ಅವರು ಕತ್ತಲೆಯ ಲೋಕದ ಜನಕೋಟಿ ನೇತಾರ, ನೊಂದವರ ಮನಮಿಡಿದ ಹೋರಾಟಗಾರ ಚರಿತ್ರೆಯ ಪುಟ ಪುಟದಿ ಅಂಬೇಡ್ಕರ್ ಅವರ ನಾಮ ಅಮರ, ಅಂಬೇಡ್ಕರ್ ಅವರ ದೇಶ ಸೇವೆ ವಿಶ್ವಕ್ಕೆ ಮಾದರಿ. ಅವರ ತತ್ವಗಳು ವಿಶ್ವಕ್ಕೆ ದಾರಿದೀಪವಾಗಲಿ ಎಂದು ಸಾಹಿತಿ ಟಿ ಎಸ್ ಒಂಟಗೂಡಿ ಅಭಿಮತ ವ್ಯಕ್ತಪಡಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಅಥಣಿಯ ರಾಜು ಕಿರಣಿಗಿ ವಹಿಸಿಕೊಂಡಿದ್ದರು.ವೇದಿಕೆಯ ಮೇಲೆ ಹಾಲಸಿದ್ದ ಒಂಟಗೂಡಿ,  ಜಡಿಸಿದ್ದ ವಂಟಗೂಡಿ, ಹಾಲಸಿದ್ಧ ವಂಟಗೂಡಿ ಮುಂತಾದವರು ಉಪಸ್ಥಿತರಿದ್ದರು. ಮೀನಾಕ್ಷಿ ಒಂಟಗೂಡಿ ಸ್ವಾಗತಿಸಿ ನಿರೂಪಿಸಿದರು ಭಾಗ್ಯಶ್ರೀ ಪೂಜೇರಿ ವಂದಿಸಿದರು.


ವರದಿ : ಡಾ. ವಿಲಾಸ್ ಕಾಂಬಳೆ 

ಕನ್ನಡ ಉಪನ್ಯಾಸಕರು 

ಹಾರೂಗೇರಿ

Image Description

Post a Comment

0 Comments