*ಮುಂಜಾವಿನ ಮಾತು*
ಮುಡಿಪು ಕಟ್ಟಿಟ್ಟರೆ
ಮರುಳಾಗುವನೇನು
ಹರಕೆ ಕಟ್ಟಿ ತೀರಿಸಿದರೆ
ಹರಸಿ ಸಲಹುವನೇನು
ಕಾಣಿಕೆಯ ಅರ್ಪಿಸಿದರೆ
ಕೈ ಹಿಡಿದು ಕಾಪಾಡುವನೇನು
ನಮ್ಮೊಳಗಿಹ ಪರಮಾತ್ಮಗೆ
ಆತ್ಮ ಸಮರ್ಪಣೆಯಾದರೆ
ಅಕ್ಕರೆಯಲಿ ಓಲೈಸುವ ಮನವೇ
*ಶುಭೋದಯ*
*ರತ್ನಾಬಡವನಹಳ್ಳಿ*
0 Comments