*ಕನ್ನಡಿಯೇ ನೋಡು*
ಕನ್ನಡಿಯೇ ನೋಡು ನೋಡು ನನ್ನ ಕಣ್ಣ ಕಾಡಿಗೆ
ನಾನಚ್ಚಿಕೊಂಡ ಈ ಕಪ್ಪು ಏನು ಹೇಳಿತು ನಿನಗೆ
ನಾಚುತ್ತ ನಿನ್ನತ್ತ ನೋಡುತ್ತಲೇ ಇರುವೆ ನಿನ್ನ ಕಡೆಗೆ
ಅತ್ತಿತ್ತ ಕಣ್ಣೊರಳಿಸಿ ಅರಳಿಸಿದಾಗ ನಿನಗಾಗಿಲ್ಲವೇ ಒಪ್ಪಿಗೆ!
ಓ ಕನ್ನಡಿಯೇ ನನ್ನ ಕಣ್ಣುಗಳೊಡನೆ ಮಾತನಾಡು
ನಾ ನಿನಗಾಗಿಯೇ ಕಣ್ಣು ಮಿಟುಕಿಸಿದೆ ನೋಡುನೋಡು
ಈ ಕಣ್ಣಿನ ಕಾಡಿಗೆಯ ಅಂದ ಚೆಂದ ಹೊಗಳಿಬಿಡು
ನಾ ನಿನ್ನ ನೋಡಿ ನೀ ನನ್ನ ನೋಡಿ ಹಾಡು ಹಾಡು!
ನನ್ನ ಕಾಣುವ ಬಗೆ ಹೇಗಿದೆ ಒಳಗೊಳಗೆ ತಳಮಳ
ಹೇಗೆ ಕಾಣುವುದೋ ಏನೋ ಮನೆಕೆ ಕಳವಳ
ಅತ್ತಿತ್ತ ಮುಖ ತಿರುವಿ ಮತ್ತೆ ಮತ್ತೆ ಇಣುಕುತ್ತಿರುವೆ
ಓ ಕನ್ನಡಿಯೇ ಹೇಳು ಈ ಕಣ್ಣುಗಳು ನಿನಗಿಷ್ಟವೇ!
ನನ್ನ ಕಣ್ಣುಗಳ ಕಾಡಿಗೆ ತಿದ್ದಿ-ತೀಡಿ ನೋಡುತ್ತಿರುವೆ
ಮುದ್ದಿನಿಂದಲೇ ನೋಡಿಯೂ ಕೂಡ ಯಾಕೆ ಸುಮ್ಮನಿರುವೆ
ನಮ್ಮಿಬ್ಬರ ಮೂಕ ನೋಟದೊಳಗೆ ಏನೇನು ಹುಡುಕಿರುವೆ
ಓ ಕನ್ನಡಿಯೇ ಮಾತಿಲ್ಲ ಮೂಕಭಾಷೆ ನಾ ನಿನ್ನ ಪ್ರೀತಿಸುವೆ
🐤 ಮಾರುತೇಶ್ ಮೆದಿಕಿನಾಳ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments