*ಸತ್ತನಂತರ ಯಾರೂ ಏನನ್ನು ಹೊತ್ತೊಯ್ಯುವದಿಲ್ಲ*
ಸತ್ತನಂತರ ಯಾರೂ ಏನನ್ನು ಹೊತ್ತೊಯ್ಯುವುದಿಲ್ಲ
ಈ ಸತ್ಯವನ್ನು ನಾವ್ಯಾರೂ ಮನಗಾಣಲೇ ಇಲ್ಲವಲ್ಲ
ಕೆಲವರು ಕಳ್ಳತನದಿಂದ ಕಾಳಧನ ಮುಚ್ಚಿಟ್ಟಾರಲ್ಲ
ಯಾಕಯ್ಯೋ ವಿಚಿತ್ರ ವಿಪರೀತ ದುರಾಸೆ ನಮಗೆಲ್ಲ!
ಮೋಸಗಾರರು ಪುಂಡ ಪೋಕರಿಗಳು ಸುಳ್ಳ ಕಳ್ಳ ಖದೀಮರು
ವಂಚಕರು ಸಂಚುಕೋರರು ಕ್ರೂರ ಕೊಲೆಗಡುಕರು
ದುಷ್ಟತನ ನೀಚ ಪ್ರವೃತ್ತಿಯ ಕಡು ಕೆಟ್ಟ ಕಾಮುಕರು
ಇಲ್ಲಸಲ್ಲದ ಅಲ್ಲದ ಕೆಲಸ ಮಾಡಿ ಸಾಧಿಸಿದ್ದಾದರೇನಿವರು!
ಬಂಗಾರ ಬೆಳ್ಳಿ ವಜ್ರ ವೈಡೂರ್ಯ ಗಳಿಸಿ ಮುಚ್ಚಿಟ್ಟವರು
ಭೂಮಿಸೀಮೆ ಹಣ ಆಸ್ತಿ ಅಂತಸ್ತು ಗಳಿಸಿಟ್ಟವರು
ಅರಮನೆ ಕೋಟೆ ಕಟ್ಟಿ ಮೆರೆದು ರಾಜ್ಯ ಆಳಿದವರು
ಯಾರೂ ಉಳಿಯಲಿಲ್ಲ ಎಲ್ಲಾ ಇಲ್ಲಿಯೇ ಬಿಟ್ಟು ಹೋದರು!
ಚಿರಚರಾಸ್ತಿ ಅಕ್ರಮ ನಗ ನಾಣ್ಯ ಸಂಪಾದಿಸಿ ಮುಚ್ಚಿಟ್ಟವರು
ಮೋಸ ಮಾಡಿ ಮನೆಮುರಿದು ಭಾರಿ ಬಂಗಲೆ ಕಟ್ಟಿಸಿದವರು
ಮತ್ತೊಬ್ಬರ ಶ್ರಮ ಕಸಿದು ಶ್ರೀಮಂತರೆನಿಸಿಕೊಂಡವರು
ಯಾರೇನೇ ಗಳಿಸಿದರೂ ಎಲ್ಲಾ ಇಲ್ಲಿಯೇ ಬಿಟ್ಟು ಹೋಗುವರು!
🐤 ಮಾರುತೇಶ್ ಮೆದಿಕಿನಾಳ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments