*ಶ್ರೀ ಪರಸಪ್ಪ. ಬಿ. ಬನಸೋಡೆ ಅವರಿಗೆ : ಸೈನಿಕ ರತ್ನ ಪ್ರಶಸ್ತಿ *
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು, ಜಿಲ್ಲಾ ಘಟಕ ಬಾಗಲಕೋಟ ಇವರು ಸಾಯಿ ಶಿಕ್ಷಣ ಸಂಸ್ಥೆ ಮುಧೋಳದಲ್ಲಿ ನಡೆದ 69ನೆಯ ಕನ್ನಡ ರಾಜ್ಯೋತ್ಸವ ಹಾಗೂ ಬೆಳಗಾವಿ ವಿಭಾಗ ಮಟ್ಟದ KJVS ಸಮ್ಮೇಳನದಲ್ಲಿ 69 ಮಾಜಿ ಸೈನಿಕರಿಗೆ "ಸೈನಿಕರತ್ನ "ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಚಡಚಣ ತಾಲೂಕಿನ ನಿವರಗಿ ಗ್ರಾಮದ ಪರಶುರಾಮ್ ಭೀಮಣ್ಣ ಬನಸೋಡೆ ಮಾಜಿ ಸೈನಿಕರು ಇವರಿಗೆ ಸೈನಿಕರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕೆ ಜೆ ವಿ ಎಸ್ ರಾಜ್ಯಾಧ್ಯಕ್ಷರಾದ ಡಾ. ಸಿ ಆರ್. ಚಂದ್ರಶೇಖರ, ರಾಜ್ಯ ಕಾರ್ಯದರ್ಶಿಗಳಾದ ಈ ಬಸವರಾಜು ಬಾಗಲ್ಕೋಟ್, ಜಿಲ್ಲಾಧ್ಯಕ್ಷರಾದ ಸಿದ್ದಣ್ಣ ಬಾಡಗಿ, ಸಾಯಿ ಶಿಕ್ಷಣ ಸಂಸ್ಥೆಯ ಕಾರ್ಯಧ್ಯಕ್ಷರಾದ ರಾಜೇಶ್ ವಾಲಿ, ವಿಜಯಪುರ ಜಿಲ್ಲಾಧ್ಯಕ್ಷರಾದ ಶ್ರೀ ಜಿ ಎಸ್ ಕಾಂಬಳೆ, ಶ್ರೀ ರಮೇಶ್ ಎಸ್ ನಾಯಕ, ಶ್ರೀ ಶಿವಾನಂದ ಕುಬಸದ್, ಮೇಜರ್ ಅಪ್ಪಾ ಸಾಬ್ ನಿಂಬಾಳಕರ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಲ್ಲಿಕಾರ್ಜುನ್ ಹೆಗ್ಗಳಗಿ ಸಾಹಿತಿ ಹಾಗೂ ನ್ಯಾಯವಾದಿ ಪ್ರಕಾಶ ವಸ್ತ್ರದ
ಡಾಕ್ಟರ್ ಆರ್‌ಎ ಕುಲಕರ್ಣಿ. ಡಾಕ್ಟರ್ ಎಸ್ ಎಸ್ ಪಾಟೀಲ್ ಹಾಗೂ ಮತ್ತಿತ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ :ಡಾ. ವಿಲಾಸ್ ಕಾಂಬಳೆ
ಕನ್ನಡ ಉಪನ್ಯಾಸಕರು
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments