🙏🙏 *ಓಂ ಶ್ರೀ ಶಾರದಾ ಗುರುಭ್ಯೋ ನಮಃ* 🙏🙏
ಶೀರ್ಷಿಕೆ : *ಮಾಣಿಕ್ಯ*
ರಕ್ತ ವರ್ಣದ ಕೆಂಪು ಹರಳಾಗಿದೆ
ಕ್ರೋಮಿಯಂ ಘಟಕದ ಅಸ್ತಿತ್ವ ವಾಗಿದೆ
ವಜ್ರದ ಜೊತೆಗಿನ ಹರಳಿನಲ್ಲಿ ಒಂದಾಗಿದೆ
ಹಾಗೆ ನಮ್ಮ ನಡೆ ನುಡಿ ಮಾಣಿಕ್ಯ ದಂತಿರಬೇಕಾಗಿದೆ
ನೀ ನನಗೆ ದೊರಕಿರುವುದೇ ಮಾಣಿಕ್ಯವು
ಅದು ಏಳೇಳು ಜನ್ಮದ ಅನುಬಂಧವು
ಎಲ್ಲೋ ಇದ್ದ ನನ್ನನು ನಿನ್ನನು ಬಂದಿಸಿದವು
ಇದು ನಾನು ಮಾಡಿದ ಪುಣ್ಯದ ಫಲವು
ದಿಕ್ಕಿಲ್ಲದೆ ಪರದೇಶಿಯಾಗಿ ಅಲೆದೆ
ಬರಿದಾದ ಬಾಳಲ್ಲಿ ನೀ ಒಲಿದು ಬಂದೆ
ಬೆಳಕಾಗಿ ಬಂದು ಮನೆ ಮನವ ತುಂಬಿದೆ
ಒಲವ ಧಾರೆಯ ಹರಿಸಿ ಹಸನುಗೊಳಿಸಿದೆ
ನಮ್ಮದೇ ಜಗವು ಎನ್ನೋಣ
ಸುಖ ದುಃಖವ ಹಂಚಿ ಕೊಳ್ಳೋಣ
ಸಂಸಾರ ಸಾಗರದಿ ಈಜಿ ನಲಿಯೋಣ
ನಮ್ಮಿಬ್ಬರನು ಬೆಸೆದ ದೈವಗೆ ಶರಣೆನ್ನೋಣ
✍️ *ಮಳೆಬಿಲ್ಲು ಡಾ. ಲೀಲಾ ಗುರುರಾಜ್* ತುಮಕೂರು.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments