ಶೀರ್ಷಿಕೆ : ಬದುಕೇಗೆ ಕಟ್ಟಲಿ*

 ದಿನಾಂಕ : ೨೩/೧೧/೩೦೨೪

ಪ್ರಕಾರ : ಕವನ

 *ಶೀರ್ಷಿಕೆ : ಬದುಕೇಗೆ ಕಟ್ಟಲಿ* 



ಈಗ ನನ್ನದೊಂದು ಪುಟ್ಟ ಗೂಡಿದೆ 

ಗೂಡಿಗೆ ಯಾರ ಆಸರೆಯು ಇಲ್ಲದೆ!

ಬಿಸಿಲಿನ ಬೇಗೆಯಲ್ಲಿ ದಿನವೆಲ್ಲ ನೊಂದೆ 

ಈ ಬದುಕು ನನಗೆ ಕಲಿಸಿದ ಪಾಠವು ಒಂದೇ!!


ಹರೆಯದ ವಯಸ್ಸಿಗೆ ಮದುವೆಯಾದೆ 

ಸಂಸಾರ ಭಾರವನ್ನೆಲ್ಲ ನಾನೇ ಹೊರೆದೆ!

ಗರ್ಭದಲ್ಲೇ ನನ್ನ ಪುಟ್ಟ ಕಂದನ ಕೊಂದೆ

ಎಲ್ಲರ ಚುಚ್ಚು ಮಾತಲಿ ಬೆಂದು ಹೋದೆ!!


ಸಂಸಾರ ಸುಖವಿಲ್ಲ ಸಿರಿತನ ಮೊದಲೇ ಇಲ್ಲ 

ಬರಿ ದುಡಿಯುವ ನನ್ನ ಕೈಗಳು ಅಷ್ಟೇಯಲ್ಲ!

ಗೋಳು ಕೇಳುವರಿಲ್ಲ ಪ್ರೀತಿ ಉಣಿಸುವರಿಲ್ಲ 

ಎತ್ತ ನೋಡಿದರೂ ಬರೀ ಕಲ್ಲು ಮುಳ್ಳುಗಳೇ ಕಂಡಿತಲ್ಲ!!


ನಾನು ಸಾಕೆಂದು ಬೇರೆಯವರ ಜೊತೆಯಲ್ಲಿ 

ಎರಡು ಕಂದನ ಕೊಟ್ಟು ಬಿಟ್ಟು ಹೋದೆಯಲ್ಲ!

ತವರಿಗೆ ಹೊರೆ ಗಂಡನಿಗೆ ಬೇಡವಾಗಿ ಬಿಟ್ಟೆನಲ್ಲ

ಬದುಕೇಗೆ ಕಟ್ಟಲಿ ಯಾರಿಗು ಕರುಣೆ ಇಲ್ಲ ಇಲ್ಲಿ!!


📝 ಕಾವ್ಯ ಪ್ರಸಾದ್

   ಚಿಕ್ಕಬಳ್ಳಾಪುರ ಜಿಲ್ಲೆ

Image Description

Post a Comment

0 Comments