ಮಹಿಳೆಯ ಅಸ್ತಿತ್ವದ ಹುಡುಕಾಟದ ನಾಟಕವೇ ಭೂಮಿಯಲ್ಲ ಇವಳು : ಎಸ್.ಎಸ್.ಮೋರೆ
ಚಿಕ್ಕೋಡಿ: ಎಚ್ ಎಲ್ ಪುಷ್ಪ ಅವರು ರಚಿಸಿರುವ ಭೂಮಿಯಲ್ಲ ಇವಳು ನಾಟಕದಲ್ಲಿ ಮಹಿಳೆಯ ಅಸ್ತಿತ್ವದ ಹುಡುಕಾಟವೇ ಪ್ರಮುಖವಾಗಿ ಕಂಡುಬರುತ್ತದೆ ಎಂದು ಕಾಗವಾಡದ ಶಿವಾನಂದ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಪ್ರೊ.ಸದಾನಂದ ಮೋರೆ ಅಭಿಪ್ರಾಯ ವ್ಯಕ್ತಪಡಿಸಿದರು.
ಚಿಕ್ಕೋಡಿ ಸಮೀಪದ ಬೇಡಿಕಿಯಾಳದ ಶ್ರೀಮತಿ ಕುಸುಮಾವತಿ ಮಿರಜಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ಮತ್ತು ಅರ್ಥಶಾಸ್ತ್ರ ವಿಭಾಗ ಆಯೋಜಿಸಿದ ಫ್ಯಾಕಲ್ಟಿ ಎಕ್ಸ್ಚೇಂಜ್ ಪ್ರೋಗ್ರಾಮ್ ಕಾರ್ಯಕ್ರಮದ ನಿಮಿತ್ತ ಹಮ್ಮಿಕೊಂಡಿದ್ದ ಸಿ ಬಸವಲಿಂಗಯ್ಯ ಅವರ ನದಿಯ ಹಾದಿಯೊಳಗೆ ವಿಮರ್ಶ ಲೇಖನವನ್ನು ಕುರಿತು ಉಪನ್ಯಾಸ ನೀಡುತ್ತಾ ಮಾತನಾಡಿದರು.
ಜನ್ನನ ಯಶೋಧರ ಚರಿತೆಯ ನಾಯಕಿಯಾದ ಅಮೃತಮತಿ ತನ್ನ ಅಸ್ತಿತ್ವಕ್ಕಾಗಿ ಹುಡುಕಾಟವನ್ನು ಮಾಡುವ ವಿಭಿನ್ನ ನೆಲೆಗಳನ್ನು ಆ ಕೃತಿಯಲ್ಲಿ ಕಾಣಬಹುದು. ಧಾರ್ಮಿಕ ನೈತಿಕ ಹಿನ್ನೆಲೆಯಿಂದ ಬಿಡಿಸಿ ನೋಡಿದರೆ ಅದೊಂದು ಶೃಂಗಾರ ಕಾವ್ಯದಂತೆ ಭಾಸವಾಗುತ್ತದೆ. ಈ ನೆಲೆಯಲ್ಲಿ ಅಷ್ಟವಂಕನೊಂದಿಗೆ ಅಮೃತಮತಿ ಅಸ್ತಿತ್ವದ ಹುಡುಕಾಟವನ್ನು ಕಾಣಬಹುದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡಿದ್ದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಕಿರಣ್ ಬಿ.ಚೌಗಲೆ ಮಾತನಾಡುತ್ತಾ ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನವನ್ನು ಸಂಪಾದಿಸಿಕೊಳ್ಳಬೇಕಾದರೆ ನಮ್ಮ ಪ್ರಾಧ್ಯಾಪಕರ ಜ್ಞಾನದೊಂದಿಗೆ ಬೇರೆ ಮಹಾವಿದ್ಯಾಲಯದ ಪ್ರಾಧ್ಯಾಪಕರುಗಳ ಜ್ಞಾನವನ್ನು ಸಹ ಸಂಪಾದಿಸಿಕೊಂಡು ಉನ್ನತ ಚಿಂತನೆ ಮತ್ತು ಸ್ಥಾನಗಳನ್ನು ಪಡೆದುಕೊಳ್ಳುವುದರ ಕಡೆಗೆ ಗಮನಹರಿಸಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ವಿಭಾಗದ ಡಾ. ಚಂದ್ರಶೇಖರ ವೈ ಅವರು ಸೂಕ್ಷ್ಮ ಅರ್ಥಶಾಸ್ತ್ರದ ಬಗ್ಗೆ ಉಪನ್ಯಾಸ ನೀಡಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರೊ.ಎ.ಡಿ.ಚೌಗಲೆ ಅವರು ಪ್ರಸ್ತಾವಿಕ ಮತ್ತು ಸ್ವಾಗತ ಮಾಡಿದರು. ಕುಮಾರಿ ಶ್ರೀದೇವಿ ಪೂಜಾರಿ ಅತಿಥಿಗಳ ಪರಿಚಯ ಮಾಡಿದರು. ಡಾ.ಹೊಂಬಯ್ಯ ಹೊನ್ನಲಗೆರೆ ವಂದಿಸಿದರು. ಪೂಜಾ ಮತ್ತು ತಂಡ ಪ್ರಾರ್ಥಿಸಿದರು. ನಿಶಾ ನಿರೂಪಿಸಿದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ವಿನಾಯಕ ಮಾದಿಗ, ಪ್ರೊ. ಪ್ರಣತಿ ಕಮತೆ ಮತ್ತು 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಪಸ್ಥಿರಿದ್ದರು.
ವರದಿ : ವಿಲಾಸ ಕಾಂಬಳೆ
ಕನ್ನಡ ಉಪನ್ಯಾಸಕರು
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments