ಕವನದ ಶೀರ್ಷಿಕೆ
ಸಕ್ಕರೆಯ ನಾಡಿನಲ್ಲಿ...
ಕನ್ನಡಾಂಬೆಯ ರಥ ಯಾತ್ರೆ...
ಪ್ರಕೃತಿಯಲ್ಲಿಯೂ ಅದೆಷ್ಟು ಪ್ರೀತಿ
ಕನ್ನಡಾಂಬೆಯ ಬಗೆಗೆ
ಸಕ್ಕರೆ ನಾಡಿನ
ಅಕ್ಕರೆಯ ಪ್ರೀತಿ
ಅಖಿಲ ಭಾರತ ಕನ್ನಡ ಸಾಹಿತ್ಯ ರಥಯಾತ್ರೆಯು
ಸಾಗುತ್ತಿದೆ ಸಕ್ಕರೆ ನಾಡಿನಲ್ಲಿ
ನೋಡಲು ಅದೆಷ್ಟು ಚಂದ
ಆ ಕಬ್ಬಿನ ಗದ್ದೆ
ಭತ್ತದ ಗದ್ದೆಯ
ಆ ಬಣ್ಣಗಳು ಕಣ್
ಒಲವನ್ನು ಹೆಚ್ಚಿಸುತ್ತೇವೆ
ಕಬ್ಬಿನ ಅ ಹೂವು
ಅದೆಷ್ಟು ಮನೋಹರ
ತಾಯಿಯ ಸಾಹಿತ್ಯ ರಥಯಾತ್ರೆಗೆ
ರಾಜಭಟ್ಟರು ಈಟಿ ಹಿಡಿದು ನಿಂತಂತೆ
ರಸ್ತೆಯ ಆಜು ಬಾಜಿನಲ್ಲಿ
ಚಿನ್ನದ ಒಡವೆಯಂತ
ತಳತಳಿಸುವ ಭತ್ತದ
ಹೊನ್ನಬಣ್ಣ
ಕನ್ನಡಿಗರ ಆ ಸಂಭ್ರಮ
ರಥಯಾತ್ರೆಯ
ನೋಡಿದ ಭಾಗ್ಯ
ನನಗೂ ದೊರಕಿತು
ಮಂಡ್ಯ ಒಂದು ಹಳ್ಳಿಯಲ್ಲಿ
ಅಲ್ಲಿರುವ ಜನರು
ಹಾಡಿ ಕುಣಿದರು
ತಾಯಿಯ ನೋಡಿ
ಹರುಷದಿ...
ಸರಿತ.ಹೆಚ್
ಕಾಡುಮಲ್ಲಿಗೆ...✍️...
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments