🙏🙏 *ಓಂ ಶ್ರೀ ಶಾರದಾ ಗುರುಭ್ಯೋ ನಮಃ* 🙏🙏
ಶೀರ್ಷಿಕೆ: *ಆಸರೆ*
ನನ್ನ ಬಾಳ ಬಳ್ಳಿಗೆ ಆದೆ ಆಸರೆ
ಯಾರೂ ಇಲ್ಲವೆಂದು ಕೊಂಡರೆ
ಬರೆದೆ ನನ್ನ ಬದುಕಲ್ಲಿ ನಿನ್ನ ಹೆಸರೆ
ನಾನಿರುವೆ ನಿನ್ನ ಜೊತೆ ಗೆಲ್ಲಿಸಲು ನೀ ಸೋತರೆ
ಅನಾಥಯಾಗಿದ್ದೆ ಆಶ್ರಮದಲ್ಲಿ
ಯಾರೂ ಇಲ್ಲ ಆಧರಿಸಲು ಬಾಳಲ್ಲಿ
ಕಷ್ಟ ನೋವು ತುಂಬಿದ ಜೀವನದಲ್ಲಿ
ಸುಖ ಸಂತೋಷ ತುಂಬಿದೆ ನನ್ನುಸಿರಿನಲ್ಲಿ
ನಿನ್ನನು ಕಂಡ ಕ್ಷಣದಿಂದಲೇ
ಸಹಾಯ ಮಾಡಿದೆ ಸಾಂತ್ವನ ಹೇಳುತ್ತಲೆ
ಆ ದೇವರೇ ಕಳುಹಿಸಿದ ದೇವದೂತನಂತಲೇ
ಅಂದಿನಿಂದ ದುಃಖ ದುಮ್ಮಾನ ಕಳೆಯುತ್ತಲೇ
ಬಾಡಿ ಹೋಗಿದ್ದ ಬದುಕಿಗೆ ಆಸರೆಯಾದೆ
ಪ್ರೀತಿ ಪ್ರೇಮ ತುಂಬಿ ಚಂದ್ರ ಚಕೋರನಾದೆ
ನನ್ನ ಹೃದಯದ ರಾಣಿ ಎಂದು ಉಸುರಿದೆ
ನಿನ್ನ ಮಾತಿಗೆ ನಾ ಸೋತು ಶರಣಾದೆ
✍️ *ಮಳೆಬಿಲ್ಲು ಡಾ. ಲೀಲಾ ಗುರುರಾಜ್* ತುಮಕೂರು
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments