* ಸಂವಾದ *

 "ರಾಧ-ಮಾಧವರ ಒಲವಿನ ಸುಂದರ  ಭಾವಪಟಕ್ಕೆ..  ಅನುರಣಿಸುವ ಮಧುರ ಭಾವಪೂರ್ಣ ಸಾಲುಗಳು...  ಅಕ್ಷರಬಂಧುವಾದ ನಿಮ್ಮ ಎದೆಯಂಗಳಕ್ಕೆ ಅರ್ಪಿಸಿದ ಹನಿಕಾವ್ಯ ಕುಸುಮವಿದು. ಒಪ್ಪಿಸಿಕೊಳ್ಳಿ.. " - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.


ಸಂವಾದ


..!


ರಾಧ...

"ಮಾಧವಾ ಇದೇನಿದು

ನಿನ್ನೆದೆ ಬಡಿತದಲ್ಲೂ....

ಕೊಳಲಿನದೇ ಇನಿದನಿ.?!"


ಮಾಧವ..

"ಕೊಳಲ ದನಿಯಲ್ಲವಿದು

ರಾಧಾ ಅದು ನಿನ್ನಯ...

ಕೊರಳಿನದೇ ಮಾರ್ದನಿ.!"


ಎ.ಎನ್.ರಮೇಶ್. ಗುಬ್ಬಿ.

Image Description

Post a Comment

0 Comments