* ರಾಮಾ ನಾಯ್ಕ್ ಅವರಿಗೆ : * ಆನೇಕಲ್ ತಾಲೂಕು ರಾಜ್ಯೋತ್ಸವ ಪ್ರಶಸ್ತಿ *

 ರಾಮಾ ನಾಯ್ಕ್ ಅವರಿಗೆ : * ಆನೇಕಲ್ ತಾಲೂಕು ರಾಜ್ಯೋತ್ಸವ ಪ್ರಶಸ್ತಿ *



   ಇತ್ತೀಚಿಗೆ ಬೆಂಗಳೂರು ನಗರದ ಆನೇಕಲ್ ತಾಲ್ಲೂಕಿನ ಆಡಳಿತ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶ್ರೀ ರಾಮಾ ನಾಯ್ಕ್ ಅವರನ್ನು ಕಾವ್ಯ ಕ್ಷೇತ್ರದಲ್ಲಿ ಗುರುತಿಸಿ  ‘ಆನೇಕಲ್ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಸನ್ಮಾನಿದೆ. 

    ಇವರ ಲೇಖನಮಾಲೆ, ಕಾವ್ಯ ರಚನೆ ಇತ್ಯಾದಿ ಸಾಹಿತ್ಯ ಕ್ಷೇತ್ರದ ಸಾಧನೆಗಳನ್ನು ಗುರುತಿಸಿ ಆನೇಕಲ್ ತಾಲ್ಲೂಕಿನ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 

   ಬೆಂಗಳೂರಿನ ಮೆಗಾ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಶಿಕ್ಷಕ ವೃತ್ತಿಯನ್ನು ನಿರ್ವಹಿಸುತ್ತಿರುವ ಇವರಿಗೆ  ಶೈಕ್ಷಣಿಕವಾಗಿ  ಹಾಗೂ ಸಾಹಿತ್ಯಿಕವಾಗಿ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಅನೇಕ ಪ್ರಶಸ್ತಿಗಳು ಮುಡಿಗೇರಿವೆ. ಶಿಕ್ಷಕರಾಗಿಯೂ, ಕಲಾವಿದರಾಗಿಯೂ ಮತ್ತು ಸಾಹಿತಿಗಳಾಗಿಯೂ ಇವರು ಹೆಸರು ಮಾಡಿದ್ದಾರೆ. 

   ಸಾಧಕರನ್ನು ಆನೇಕಲ್ ಶಾಸಕರಾದ ಬಿ ಶಿವಣ್ಣ ಅವರು ಶಾಲು ಹೊದಿಸಿ, ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಜೊತೆಗೆ ತಹಸಿಲ್ದಾರರು, ತಾಲ್ಲೂಕಾ ಅಧ್ಯಕ್ಷರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ತಾಲ್ಲೂಕು ಆಡಳಿತದ ಅಧಿಕಾರಿಗಳು ವೇದಿಕೆಯಲ್ಲಿ ಪಾಲ್ಗೊಂಡಿದ್ದರು.

     ರಾಮಾ ನಾಯ್ಕ್ ಅವರನ್ನು ಅನೇಕ ಸಂಘ ಸಂಸ್ಥೆಗಳು  ಪ್ರಶಸ್ತಿಗಳನ್ನು ನೀಡಿ ಗೌರವಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ವಿಶೇಷವಾಗಿ ರಾಜ್ಯಮಟ್ಟದಲ್ಲಿ :

     ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ,ಕನ್ನಡ ಕಾಯಕಶ್ರೀ ಪ್ರಶಸ್ತಿ, ಸಾಹಿತ್ಯ ಸೇವಾ ಪ್ರಶಸ್ತಿ, ಏಕತಾ ಕಲಾಶ್ರೀ ಯೋಗಿ ಪ್ರಶಸ್ತಿ, ಕವಿ ಕಣ್ಮಣಿ ಪ್ರಶಸ್ತಿ, ಕವಿ ವಿಭೂಷಣ , ಕಲಾಕೇಸರಿ ಅವಾರ್ಡ್, ಕನ್ನಡ ಬರಹ ರತ್ನ, ಕರಾವಳಿ ಸಾಹಿತ್ಯ ರತ್ನ, ಸಾಹಿತ್ಯ ಸೌರಭ, ಕರ್ನಾಟಕ ಸುವರ್ಣ ಸಿರಿ ಪ್ರಶಸ್ತಿ,

ಗುರುಕುಲ  ತಿಲಕ ಪುರಸ್ಕಾರ, ಚಾಲುಕ್ಯರತ್ನ ಇಮ್ಮಡಿ ಪುಲಕೇಶಿ ಪ್ರಶಸ್ತಿ, ಅಕ್ಷರನಾದ ಸೇವಾರತ್ನ ಪ್ರಶಸ್ತಿ, ಕವಿ ಪ್ರೇರಣಾ ಪ್ರಶಸ್ತಿ,ಡಾ. ಪುಟ್ಟರಾಜ ಗವಾಯಿ ಸದ್ಭಾವನಾ ಪ್ರಶಸ್ತಿ, ಗುರು ದ್ರೋಣಾಚಾರ್ಯ ಪ್ರಶಸ್ತಿ , ಅಕ್ಷರನಾದ ಬಸವಶ್ರೀ ಪ್ರಶಸ್ತಿ, ಹೆಮ್ಮೆಯ ಕನ್ನಡಿಗ ಪ್ರಶಸ್ತಿ,

ಸ್ವರ್ಣಸಿರಿ ಪ್ರಶಸ್ತಿ  ಮುಂತಾದವುಗಳು. 

   ರಾಷ್ಟ್ರೀಯ ಪ್ರಶಸ್ತಿಗಳಾದ - ಶ್ರೀ ಕೃಷ್ಣದೇವರಾಯ ರಾಷ್ಟ್ರೀಯ ಪುರಸ್ಕಾರ , 

ವಿಶ್ವ ಜ್ಞಾನ ಶ್ರೀ ಪ್ರಶಸ್ತಿ ,  ಅಂತರಾಷ್ಟ್ರೀಯ ಮಟ್ಟದ 'ಮಹಾತ್ಮ ಗಾಂಧಿ ಇಂಡಿಯಾ ಐಕಾನ್ ಅವಾರ್ಡ್', 'ಭಾರತರತ್ನ ಸರ್ವಪಲ್ಲಿ ಡಾ. ರಾಧಾಕೃಷ್ಣನ್ ಅವಾರ್ಡ್', ‘ಯುನೈಟೆಡ್ ನೇಷನ್ ಅವಾರ್ಡ್’ ಮುಂತಾದವುಗಳು.

    ಹಾವೇರಿ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ನಡೆದ ವಿಶ್ವ ದಾಖಲೆಯ ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದು , ಕನ್ನಡ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ನೋಂದಾವಣೆಗೊಂಡಿದೆ. ಅಲ್ಲದೆ ವರ್ಲ್ಡ್ ಪ್ರೆಸ್ ಬುಕ್ ಆಫ್ ರೆಕಾರ್ಡ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಶಸ್ತಿ, ಪುರಸ್ಕಾರ, ಗೌರವಗಳು ದೊರಕಿವೆ. ಇವುಗಳಷ್ಟೇ ಅಲ್ಲದೆ ಕೇಂದ್ರ ಸರ್ಕಾರದ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದ ಅಡಿಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರಿಂದ ಅಭಿನಂದನಾ ಪತ್ರವು ಇವರನ್ನು ಗೌರವಿಸಿದೆ.


ವರದಿ : ಡಾ. ವಿಲಾಸ ಕಾಂಬಳೆ 

ಕನ್ನಡ ಉಪನ್ಯಾಸಕರು 

ಹಾರೂಗೇರಿ

Image Description

Post a Comment

0 Comments