ಮುಷ್ಠಿ..!

 “ಇದು ಚಿತ್ರಕ್ಕಾಗಿ ಬರೆದ ಕವಿತೆಯಲ್ಲ. ಚಿತ್ರವೇ ಬರೆಸಿದ ಭಾವಗೀತೆ. ಅಂತರ್ಜಾಲದಲ್ಲಿ ಕಂಡ ಈ ಚಿತ್ರ ನನ್ನೆದೆಯಲ್ಲಿ ಮೂಡಿಸಿದ ಭಾವಸಂವೇದನೆಗಳ ಅಕ್ಷರರೂಪವೇ ಈ ಕವಿತೆ. ಈ ಡಿಜಿಟಲ್ ಯುಗದಲ್ಲಿ ಕ್ರಿಯಾತ್ಮಕ ಮನಸುಗಳು ಏನೇನೆಲ್ಲ ಅದ್ಭುತಗಳನ್ನು ಕಲ್ಪಿಸಿಕೊಳ್ಳುತ್ತವೆ. ಆ ಕಲ್ಪನೆಗಳನ್ನು ಅದೆಷ್ಟು ಅನನ್ಯವಾಗಿ ಅಭಿವ್ಯಕ್ತಿಸುತ್ತವೆ. ಅದೆಷ್ಟು ಅಪೂರ್ವವಾಗಿ ವಿನ್ಯಾಸಗೊಳಿಸುತ್ತವೆ. ನಿಜಕ್ಕೂ ಇಂತಹ ಡಿಜಿಟಲ್ ಚಿತ್ರಕಾರರಿಗೊಂದು ಅಚ್ಚರಿತುಂಬಿದ ಸಲಾಮ್. ಏನಂತೀರಾ..?” - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ. 


ಮುಷ್ಠಿ..!



ಕಟ್ಟಿದ ಮುಷ್ಠಿಯಂತೆ

ಹಿಡಿಗಾತ್ರದ ಹೃದಯ

ಆಗದಿರಲೆಂದು ಕಠಿಣ.!


ಸ್ಫುರಿವ ಸಮಷ್ಟಿಯಂತೆ

ಹೃದಯ ವೈಶಾಲ್ಯದಿ

ಹರಿಸುತಿರಲಿ ಕರುಣ.!


ಹೃದಯ ಮುಷ್ಠಿಕಟ್ಟುತ

ಮೆರೆದವರೆಲ್ಲಾ ನಿತ್ಯವು

ನರಳಿದರು ಬದುಕಲ್ಲಿ.!


ಎದೆಯ ಅಬ್ಧಿಯಾಗಿಸಿ

ಮೊರೆದವರೆಲ್ಲ ಸದಾ

ನಳನಳಿಸಿದರು ಬೆಳಕಲ್ಲಿ.!


ಎ.ಎನ್.ರಮೇಶ್.ಗುಬ್ಬಿ.

Image Description

Post a Comment

0 Comments